ಉಳ್ಳಾಲ: ಹಲವರು ಜೆಡಿಎಸ್‌ಗೆ ಸೇರ್ಪಡೆ
Update: 2018-04-27 22:22 IST
ಉಳ್ಳಾಲ, ಎ.27: ಉಳ್ಳಾಲ ನಗರಸಭೆಯ ಪಕ್ಷೇತರ ಅಭ್ಯರ್ಥಿ ಫಾರೂಕ್ ಯು.ಎಚ್ ಹಾಗೂ ದಿನಕರ್ ಉಳ್ಳಾಲ ಸಹಿತ ಹಲವರು ಶುಕ್ರವಾರ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿನ ಜೆಡಿಎಸ್ ಚುನಾವಣಾ ಕಾರ್ಯಾಲಯದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು.
ಈ ಸಂದರ್ಭ ಮಾತನಾಡಿದ ಜೆಡಿಎಸ್ ದ.ಕ. ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕುಂಞಿ, ಅಹಂಕಾರದ ಮಾತುಗಳು ಸಚಿವ ಖಾದರ್ ಅವರಿಗೆ ಇದೀಗ ನಿದ್ರೆಯಿಲ್ಲದ ರಾತ್ರಿಗಳನ್ನು ಉಂಟು ಮಾಡಿದೆ ಎಂದರು.
ಜೆಡಿಎಸ್ ಅಭ್ಯರ್ಥಿ ಮಾಜಿ ಮೇಯರ್ ಅಶ್ರಫ್ ಮಾತನಾಡಿ, ಹಣದ ಆಸೆಯಿಲ್ಲದೆ ಹಿಂದಿನಿಂದಲೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೇನೆ. ಜನರ ಬೆಂಬಲವೇ ಸ್ಫೂರ್ತಿ ಎಂದರು.
ಜೆಡಿಎಸ್ ಮಂಗಳೂರು ಕ್ಷೇತ್ರ ಅಧ್ಯಕ್ಷ ಮೋಹನದಾಸ ಶೆಟ್ಟಿ, ಮುಖಂಡರಾದ ಅಕ್ಸಾ ಉಸ್ಮಾನ್, ಝಾಕಿರ್ ಉಳ್ಳಾಲ್, ನಾಸಿರ್, ಎಚ್.ಸಾಲಿ, ನಝೀರ್ ಉಳ್ಳಾಲ್, ವಿದ್ಯಾರ್ಥಿ ಜನತಾ ದಳದ ಸಿನಾನ್, ಅಝೀಝ್ ಮಲಾರ್, ಮೆಹಬೂಬ್, ಸೂಫಿ ಕುಂಞಿ, ಪುತ್ತುಮೋನು, ಸತ್ತಾರ್ ಸಜಿಪ, ಕುಂಞಿ ಬಾವಾ, ಝೈನುದ್ದೀನ್ ಮುಂತಾದವರು ಉಪಸ್ಥಿತರಿದ್ದರು