×
Ad

‘ಕಾನೂರಾಯಣ’ ಕನ್ನಡ ಚಲನಚಿತ್ರ ಬಿಡುಗಡೆ

Update: 2018-04-27 22:39 IST

ಉಡುಪಿ, ಎ.27: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ತ್ರೀಶಕ್ತಿ ಸಂಘದ 20ಲಕ್ಷ ಸದಸ್ಯರು ನಿರ್ಮಾಪಕರಾಗಿರುವ ಟಿ.ಎಸ್.ನಾಗಾಭರಣ ನಿರ್ದೇಶನದ ‘ಕಾನೂರಾಯಣ’ ಕನ್ನಡ ಚಲನಚಿತ್ರ ಇಂದು ಉಡುಪಿಯ ಅಲಂಕಾರ್ ಥಿಯೇಟರ್‌ನಲ್ಲಿ ಬಿಡುಗಡೆಗೊಂಡಿತು.

ಚಲನಚಿತ್ರವನ್ನು ಉದ್ಘಾಟಿಸಿದ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಮಹಾಪ್ರಬಂಧಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, 20ಲಕ್ಷ ನಿರ್ಮಾಪಕರು ಇರುವ ಮೊದಲ ಸಿನೆಮಾ ಇದಾಗಿದ್ದು, ಈ ಮೂಲಕ ಹೊಸ ಇತಿಹಾಸವನ್ನು ಬರೆದಿದೆ. ಸ್ವಾಭಿಮಾನಿ ಮಹಿಳೆಯರ ಕಥೆಯನ್ನು ಹೊಂದಿರುವ ಈ ಸಿನೆಮಾ 100 ದಿನ ಪೂರೈಸಿ ದಾಖಲೆ ನಿರ್ಮಿಸಲಿ ಎಂದು ಹಾರೈಸಿದರು.

 ಈ ಸಂದರ್ಭದಲ್ಲಿ ಪ್ರಸನ್ನ ಕುಮಾರ್ ಅಜ್ಜರಕಾಡು, ಉಡುಪಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಹರೀಶ ಶೆಟ್ಟಿ ಚೇರ್ಕಾಡಿ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನವೀನ್ ಅಮೀನ್, ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಯೋಜನಾಧಿಕಾರಿ ಮಾಲತಿ ದಿನೇಶ್, ವೇದಿಕೆ ಶಂಕರ ಕುಲಾಲ್, ಸತ್ಯೇಂದ್ರ ಪೈ, ಪ್ರದೀಪ್ ಶೆಟ್ಟಿ, ಅಲಂಕಾರ್ ಥಿಯೇಟರ್‌ನ ಮ್ಯಾನೇಜರ್ ಜಗದೀಶ ಕುಡ್ವ ಜನಜಾಗೃತಿ ಕೇಂದ್ರ ಸಮಿತಿ ಅಧ್ಯಕ್ಷ ಗಜಾನನ ಕುಂದರ್, ಮಮತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಎಸ್‌ಕೆಡಿಆರ್‌ಡಿಪಿ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ. ಪ್ರಾಸ್ತಾವಿಕ ವಾಗಿ ಮಾತನಾಡಿದರು. ಉಡುಪಿ ಕೃಷಿ ಮೇಲ್ವಿಚಾರಕ ಶಿವಾನಂದ ಕೆ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News