ಸುಳ್ಯ ವಿಧಾನಸಭಾ ಕ್ಷೇತ್ರ: 6 ಅಭ್ಯರ್ಥಿಗಳು ಅಂತಿಮ ಕಣದಲ್ಲಿ
ಸುಳ್ಯ, ಎ.27: ಮೀಸಲು ಕ್ಷೇತ್ರವಾಗಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಓರ್ವ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದಾರೆ. ರಮೇಶ್ ಕೆ. ಎಂಬವರು ಶುಕ್ರವಾರ ನಾಮಪತ್ರ ಹಿಂದೆತೆಗೆದುಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿ ಎಸ್.ಅಂಗಾರ, ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ರಘು, ಬಿಎಸ್ಪಿ ಅ್ಯರ್ಥಿಯಾಗಿ ರಘು ಧರ್ಮಸೇನ, ಪಕ್ಷೇತರ ಅಭ್ಯರ್ಥಿಗಳಾಗಿ ಸುಂದರ ಕೊಯ್ಲ, ಚಂದ್ರಶೇಖರ ಪಲ್ಲತ್ತಡ್ಕ, ಸಂಜೀವ ಬಾಬುರಾವ್ ಪುರಂದವಾಡ ಅಂತಿಮ ಕಣದಲ್ಲಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಿ ಶಾಸಕ ಎಸ್.ಅಂಗಾರ 7ನೇ ಬಾರಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳೆದ 3 ಚುನಾವಣೆಗಳಲ್ಲೂ ಬಿಜೆಪಿಯ ಅಂಗಾರ ಅವರ ಎದುರು ಪರಾಜಿತರಾದ ಡಾ.ರಘು 4ನೇ ಬಾರಿಗೆ ಕಣದಲ್ಲಿದ್ದಾರೆ. ಬಿಎಸ್ಪಿ ಅಭ್ಯರ್ಥಿಯಾಗಿ ಬೆಳ್ತಂಗಡಿಯ ರಘು ಧರ್ಮಸೇನ, ಮೀಸಲು ಮುಕ್ತಿ ಹೋರಾಟ ಸಮಿತಿಯ ಬೆಂಬಲದೊಂದಿಗೆ ಈ ಬಾರಿ ಪಕ್ಷೇತರರಾಗಿ ಸಂಜೀವ ಬಾಬು ರಾವ್ ಕುರಂದವಾಡ, ಅಂಬೇಡ್ಕರ್ ಸೇವಾ ಸಮಿತಿ ಕೂಡಾ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷ ಚಂದ್ರಶೇಖರ ಪಲ್ಲತ್ತಡ್ಕ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಸುಂದರ ಕೊಯ್ಲ ಅಂತಿಮ ಕಣದಲ್ಲಿದ್ದಾರೆ.