ಬಾಲಕನಿಂದ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ: ಮದ್ರಸ ಗುರುವಿನ ಬಂಧನ
ಹೊಸದಿಲ್ಲಿ, ಎ.27: ಬಾಲಕನೊಬ್ಬ ಅಪ್ರಾಪ್ತೆಯನ್ನು ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಗಾಝಿಪುರ ಮದ್ರಸದ ಧರ್ಮಗುರುವನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಾಲಾಪರಾಧಿಯನ್ನು ಈ ಮೊದಲು ಬಂಧಿಸಿದ್ದರು.
ಬಾಲಕಿಯನ್ನು ಮದ್ರಸದೊಳಗೆ ಕೂಡಿಹಾಕಲಾಗಿತ್ತು ಎಂದು ಸಂತ್ರಸ್ತೆಯ ಕುಟುಂಸ್ಥರು ಆರೋಪಿಸಿದ್ದಾರೆ. ಮದ್ರಸ ಆವರಣದಲ್ಲಿ ಬಾಲಕಿಯನ್ನು ಕೂಡಿ ಹಾಕಲಾಗಿತ್ತು ಎಂದು ಮದ್ರಸದ ಧರ್ಮಗುರುವಿಗೆ ತಿಳಿದಿತ್ತು ಎಂದು ಆರೋಪಿಸಲಾಗಿದೆ. ಆದರೆ ಧರ್ಮಗುರು ಅತ್ಯಾಚಾರ ಎಸಗಿದ್ದಾನೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲವಾಗಿದೆ.
ಮಾರ್ಕೆಟ್ ಗೆ ತೆರಳಿದ್ದ ತನ್ನ ಪುತ್ರಿ ವಾಪಸ್ ಬಂದಿಲ್ಲ ಎಂದು ಎಪ್ರಿಲ್ 21ರಂದು ಗಾಝಿಪುರ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಕೂಡಲೇ ಪೊಲೀಸರು ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ್ದು, ಬಾಲಕ ಬಾಲಕಿಯನ್ನು ಹೊತ್ತೊಯ್ಯುವ ದೃಶ್ಯಗಳು ಪತ್ತೆಯಾಗಿತ್ತು.
ನೀಲಮಣಿ ಕಾಲನಿಯಲ್ಲಿರುವ ಮದ್ರಸದಲ್ಲಿ ಬಾಲಕ ಪತ್ತೆಯಾಗಿದ್ದ ಹಾಗು ಬಾಲಕಿಯನ್ನು ರಕ್ಷಿಸಲಾಗಿತ್ತು. ಬಾಲಕಿಯ ಅತ್ಯಾಚಾರಕ್ಕೊಳಗಾಗಿರುವು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.