ಈ ಯುವಕ ತನ್ನ ತಂದೆಯನ್ನೇ ಕೊಲ್ಲಲು ಸುಪಾರಿ ನೀಡಿದ್ದೇಕೆ ಗೊತ್ತಾ ?
ಪಾಟ್ನಾ, ಎ. 27: ತಂದೆಯ ಹತ್ಯೆಗೆ ಸಂಚು ರೂಪಿಸಿದ್ದ ಪುತ್ರ ಹಾಗೂ ಇಬ್ಬರು ಸುಪಾರಿ ಕೊಲೆಗಾರರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ರೈಲ್ವೇ ಉದ್ಯೋಗಿಯಾಗಿದ್ದ ಓಂ ಪ್ರಕಾಶ್ ಮಂಡಲ್ ಅವರಿಗೆ ಮುಂಗೇರ್ ಜಿಲ್ಲೆಯ ಪೂರ್ವ ಕಾಲನಿ ಪೊಲೀಸ್ ಠಾಣಾ ಪ್ರದೇಶದ ಆಫಿಸರ್ ಕ್ಲಬ್ ರಸ್ತೆಯಲ್ಲಿ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದಾಗ ಗುಂಡು ಹಾರಿಸಲಾಗಿತ್ತು. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಂಡಲ್ ಅವರ ಪುತ್ರ ಪವನ್ ಕಳೆದ ಕೆಲವು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ. ಆದರೆ, ಯಶಸ್ವಿಯಾಗಿರಲಿಲ್ಲ. ತಂದೆ ಎಪ್ರಿಲ್ 30ರಂದು ತಂದೆ ನಿವೃತ್ತರಾಗಲಿದ್ದರು. 23 ವರ್ಷದ ಪವನ್ ತಂದೆಯ ಉದ್ಯೋಗ ಸಿಗಬಹುದು ಎಂಬ ಆಸೆಯಿಂದ ತಂದೆಯನ್ನು ಹತ್ಯೆ ನಡೆಸಲು ಸಂಚು ರೂಪಿಸಿದ್ದಾನೆ ಎಂದು ಪೂರ್ವ ಕಾಲನಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ತಂದೆ ಹತ್ಯೆಗೆ ಪವನ್ ಇಬ್ಬರು ಸುಪಾರಿ ಕೊಲೆಗಾರರೊಂದಿಗೆ 2 ಲಕ್ಷ ಗುತ್ತಿಗೆ ಮಾಡಿಕೊಂಡಿದ್ದಾನೆ ಹಾಗೂ 1 ಲಕ್ಷ ರೂಪಾಯಿಯನ್ನು ಮುಂಗಡವಾಗಿ ನೀಡಿದ್ದಾನೆ ಎಂದು ಅವರು ಹೇಳಿದ್ದಾರೆ.