ಮುಂದಿನ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಈ ಸ್ಪರ್ಧೆಯಿಲ್ಲ

Update: 2018-04-28 14:30 GMT

ಹೊಸದಿಲ್ಲಿ, ಎ.28: ಬರ್ಮಿಂಗ್ಹಾಮ್‌ನಲ್ಲಿ 2022ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶೂಟಿಂಗ್ ಸ್ಪರ್ಧೆ ಇರುವುದಿಲ್ಲ ಎಂದು ಕಾಮನ್‌ವೆಲ್ತ್ ಕ್ರೀಡಾಕೂಟದ ಒಕ್ಕೂಟ(ಸಿಜಿಎಫ್) ಸ್ಪಷ್ಟಪಡಿಸಿದೆ.

ಶೂಟಿಂಗ್ ಸ್ಪರ್ಧೆಯನ್ನು ಕೈಬಿಡುವ ನಿರ್ಧಾರವನ್ನು ವಿರೋಧಿಸಿ ಭಾರತದ ಕ್ರೀಡಾ ಸಚಿವಾಲಯವು ಸಿಜಿಎಫ್‌ಗೆ ಪತ್ರ ಬರೆದಿತ್ತು. ಅಲ್ಲದೆ, ಶೂಟಿಂಗ್ ಸ್ಪರ್ಧೆಯನ್ನು ಕೈಬಿಟ್ಟರೆ ಕ್ರೀಡಾಕೂಟವನ್ನು ಬಹಿಷ್ಕರಿಸಲಾಗುವುದು ಎಂದು ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ(ಎನ್‌ಆರ್‌ಎಐ) ಅಧ್ಯಕ್ಷ ರಣೀಂದರ್ ಸಿಂಗ್ ಎಚ್ಚರಿಕೆ ನೀಡಿದ್ದರು.

 ಆದರೆ, ಇದೀಗ ಈ ಪತ್ರಕ್ಕೆ ಇ-ಮೇಲ್ ಮೂಲಕ ಸ್ಪಷ್ಟನೆ ನೀಡಿರುವ ಸಿಜಿಎಫ್, ಕ್ರೀಡಾಕೂಟದ ಆತಿಥೇಯ ರಾಷ್ಟ್ರಗಳು ತಮಗೆ ಉತ್ತಮ ಎನಿಸುವ ಸ್ಪರ್ಧೆಗಳ ಪಟ್ಟಿಯನ್ನು ನೀಡುತ್ತಿದ್ದು, ಇದಕ್ಕೆ ಆದ್ಯತೆ ನೀಡಬೇಕಾಗುತ್ತದೆ ಎಂದು ತಿಳಿಸಿದೆ. ಈ ನಿರ್ಧಾರದ ಬಗ್ಗೆ ಅಸಮಾಧಾನ ಮೂಡುತ್ತದೆ ಎಂಬುದು ನಮಗೆ ತಿಳಿದಿದೆ. ಆದರೆ ಕ್ರೀಡಾಕೂಟದ ಆತಿಥೇಯತ್ವ ವಹಿಸಿಕೊಂಡಿರುವ ರಾಷ್ಟ್ರವು ಸಿಜಿಎಫ್‌ನ ನೀತಿ ನಿಯಮ ಗಳ ಚೌಕಟ್ಟಿನಲ್ಲಿರುವ ಸ್ಪರ್ಧೆಯನ್ನು ಸೂಚಿಸಿದರೆ ಅದಕ್ಕೆ ಪ್ರಾಮುಖ್ಯತೆ ನೀಡಬೇಕಾಗುತ್ತದೆ ಎಂದು ಸಿಜಿಎಫ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News