ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅರ್ಜಿ ಆಹ್ವಾನ
ಮಂಗಳೂರು, ಎ.29: ದ.ಕ.ಜಿಲ್ಲೆಯ ಪ್ರತಿಭಾವಂತ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ 6ನೇ ಅಥವಾ ನಂತರದ ತರಗತಿಗಳಿಗೆ ದಾಖಲಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನವಾಗಿದೆ.
ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಶಾರದಾ ಗಣಪತಿ ವಿದ್ಯಾಕೇಂದ್ರ ಮತ್ತು ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಹಾಗೂ ವಿಟ್ಲ ಬಸವನ ಗುಡಿಯ ಜೆಸಿ ಆಂಗ್ಲ ಮಾಧ್ಯಮ ಶಾಲೆ, ಮತ್ತು ವಿದ್ಯಾಗಿರಿಯ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ, ಕೋಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯಕ್ಕೆ ಸೇರ್ಪಡೆಗೊಳ್ಳಲು ಅವಕಾಶವಿದೆ.
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಮತ್ತು ಷರತ್ತುಗಳು: ದ.ಕ.ಜಿಲ್ಲೆಯ ಪರಿಶಿಷ್ಟ ವರ್ಗಕ್ಕೆ ಸೇರಿರಬೇಕು. (ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು), ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 2 ಲಕ್ಷ ರೂ.ಗೆ ಮೀರಿರಬಾರದು. (2016-17ನೇ ಸಾಲಿನ ಆದಾಯ ಪ್ರಮಾಣ ಪತ್ರ ಲಗತ್ತೀಕರಿಸಬೇಕು-ಜನನ ಪ್ರಮಾಣ ಪತ್ರವನ್ನು ಲಗ್ತೀಕರಿಸಬೇಕು), ಪಾಸಪೋರ್ಟ್ ಸೈಝ್ ಫೋಟೋ, ಪ್ರತಿಭಾವಂತ ವಿದ್ಯಾರ್ಥಿಯಾಗಿರಬೇಕು. 5ನೇ ತರಗತಿಯಲ್ಲಿ ಶೇ.60 ಅಂಕ ಪಡೆದಿರಬೇಕು. ವಿದ್ಯಾರ್ಥಿಯು ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿಯ ಜೆರಾಕ್ಸ್ ಪ್ರತಿಯನ್ನು ಲಗ್ತೀಕರಿಸಬೇಕು, ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ) ಸಲ್ಲಿಸಬೇಕು. ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಪುಸ್ತಕದ ಜೆರಾಕ್ಸ್ ಪ್ರತಿ ಹಾಗೂ ಐಎಫ್‌ಎಸ್‌ಸಿ ಕೋಡ್ ಸಲ್ಲಿಸಬೇಕು.
ಗರಿಷ್ಠ ರೂ. 50,000 ರೂ. ಶಾಲಾ ಶುಲ್ಕವನ್ನು ಸರಕಾರದಿಂದ ಭರಿಸಲಾಗುವುದು. (ಶಾಲೆಯ ಕಡ್ಡಾಯ ಶುಲ್ಕ, ಸಮವಸ್ತ್ರ, ಪಠ್ಯಪುಸ್ತಕ, ಪ್ರವಾಸ ಭತ್ಯೆ ಮತ್ತು ಇತರ ಭತ್ಯೆಗಳನ್ನು ಒಳಗೊಂಡಿರುತ್ತದೆ), ಅಪೂರ್ಣ ಅರ್ಜಿ, ತಡವಾಗಿ ಬಂದ ಅರ್ಜಿ ಹಾಗೂ ನಿಬಂಧನೆಗಳನ್ನು ಪೂರೈಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಸುಳ್ಳು ಮಾಹಿತಿ ಹಾಗೂ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿದ ಪೋಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ವಿವರಗಳಿಗೆ ಯೋಜನಾ ಸಮನ್ವಯಾಧಿಕಾರಿ, ಐ.ಟಿ.ಡಿ.ಪಿ. ಕಚೇರಿ, ಅಶೋಕನಗರ ಅಂಚೆ, ಮಂಗಳೂರು-575006 (ದೂ.ಸಂ: 0824-2451269) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.