ಬಂಟ್ವಾಳದಲ್ಲಿ ರೈ ಗೆಲುವು ಖಚಿತ: ಪೂಜಾರಿ
ಬಂಟ್ವಾಳ, ಎ. 29: ರಾಜ್ಯದ ಹಿರಿಯ ಶಾಸಕ, ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಿ. ರಮಾನಾಥ ರೈ ಅವರ ವಿರುದ್ಧ ಬಿಜೆಪಿ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಯೇ ಇಲ್ಲ. ಬಂಟ್ವಾಳದಲ್ಲಿ ರೈ ಗೆಲುವು ಖಚಿತ ಎಂದು ಮೆಸ್ಕಾಂ ಬಂಟ್ವಾಳ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಇತರ ವಿಧಾನ ಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಬಂಟ್ವಾಳದಲ್ಲಿ ಅಭೂತಪೂರ್ವ ಅಭಿವೃದ್ಧಿ ನಡೆದಿದ್ದು, ಶಾಸಕ ರೈಯವರ ಪ್ರಾಮಾಣಿಕ ಪರಿಶ್ರಮದಿಂದ ಸಮಗ್ರವಾಗಿ ಅಭಿವೃದ್ಧಿಗೊಂಡಿರುವ ಬಂಟ್ವಾಳ ಇತರ ಕ್ಷೇತ್ರಗಳಿಗೆ ಮಾದರಿಯಾಗಿದೆ ಎಂದವರು ತಿಳಿಸಿದ್ದಾರೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲ, ಸರಪಾಡಿ-ಉಳಿ,ಕನ್ಯಾನ, ಪೊಳಲಿ, ಬೆಂಜನಪದವು, ವಾಮದಪದವು, ಕಾವಳಮೂಡೂರು ಗ್ರಾಮಗಳಲ್ಲಿ ಜನರ ಬಹುಮುಖ್ಯ ಬೇಡಿಕೆಗಳು ಈಡೇರಿಸಲಾಗಿದ್ದು, ಬಹುಗ್ರಾಮ ಕುಡಿಯುವ ನೀರು ಯೋಜನೆ, ಮಿನಿ ಮಿಧಾನಸೌಧ, ಮೆಸ್ಕಾಂ ಕಟ್ಟಡ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, 100 ಬೆಡ್‌ಗಳ ಆಸ್ಪತ್ರೆ, ಮೊದಲಾದ ಕಾಮಗಾರಿಗಳು ಬಂಟ್ವಾಳದ ಪಥವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಂತೆ ಮಾಡಿದೆ ಎಂದು ಪ್ರಶಂಸಿದ ಅವರು, ಬಂಟ್ವಾಳ ಕ್ಷೇತ್ರದಲ್ಲಿ ಇನ್ನು ಕೆಲಸವೇ ಉಳಿದಿಲ್ಲ ಎನ್ನುವರಷ್ಟರ ಮಟ್ಟಿಗೆ ಶಾಸಕರು ಪರಿಶ್ರಮಿಸಿದ್ದಾರೆ ಎಂದವರು, ಈ ಬಾರಿ ರೈಯವರು ಯಾವುದೇ ಸವಾಲಿಲ್ಲದೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.