×
Ad

ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ

Update: 2018-04-29 20:55 IST

ಬಂಟ್ವಾಳ, ಎ.29: ಸೇತುವೆಯ ಮೇಲಿಂದ ನೇತ್ರಾವತಿ ನದಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಪಾಣೆಮಂಗಳೂರಿನಲ್ಲಿ ನಡೆದಿದೆ.

ರಂಜನ್ ಬಿ.ವಿ. (50) ಆತ್ಮಹತ್ಯೆ ಮಾಡಿಕೊಂಡ ಎಂದು ಗುರುತಿಸಲಾಗಿದೆ.

ಘಟನ ವಿವರ: ಸಂಜೆಯ ಸುಮಾರಿಗೆ ಕೆಂಪು ಬಣ್ಣದ ಬ್ಯಾಗ್ ಹಿಡಿದುಕೊಂಡು ವ್ಯಕ್ತಿಯೊಬ್ಬರು ಸೇತುವೆಯ ಮೇಲೆ ಅತ್ತಿಂದಿತ್ತ ನಡೆದಾಡುತ್ತಿದ್ದರು ಎನ್ನಲಾ ಗಿದ್ದು. ಇದನ್ನು ಸೇತವೆಯಲ್ಲಿ ಸಂಚರಿಸುತಿದ್ದ  ರಿಕ್ಷಾ ಚಾಲಕರೊಬ್ಬರು ಗಮನಿಸಿದ್ದರು.  ರಿಕ್ಷಾ ಚಾಲಕ  ಅದೇ ಸೇತುವೆಯಲ್ಲಿ ವಾಪಸ್  ಬಂದಾಗ ಕೇವಲ ಬ್ಯಾಗ್ ಮಾತ್ರ ಸೇತುವೆಯಲ್ಲಿದ್ದು ವ್ಯಕ್ತಿ ಇಲ್ಲದೆ ಇರುವುದನ್ನು ಗಮನಿಸಿ ನದಿಯತ್ತ ಇಣುಕಿದಾಗ  ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯ ಈಜುಗಾರರ ಮೂಲಕ ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಇವರ ಬ್ಯಾಗಿನಲ್ಲಿದ್ದ ಲೈಸನ್ಸ್ ಹಾಗೂ ಪಾನ್‌ಕಾರ್ಡಿನಲ್ಲಿ ಬೆಂಗಳೂರಿನ ಜೆ.ಪಿ ನಗರದ ವಿಳಾಸವನ್ನು ನೀಡಲಾಗಿದೆ. ಅದೇ ದಾಖಲೆಯಲ್ಲಿ ತಂದೆಯ ಹೆಸರು ವಿಶ್ವನಾಥ ರಾವ್ ಬಾಯಾರು ಎಂದು ನಮೂದಿಸಲಾಗಿದೆ.  ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News