14 ವರ್ಷದ ಬಾಲಕಿಯ ಮೇಲೆ ಐವರಿಂದ ಅತ್ಯಾಚಾರ

Update: 2018-04-29 16:31 GMT

ಜಬಲ್‌ಪುರ, ಎ. 29: ಹದಿನಾಲ್ಕು ವರ್ಷದ ಬಾಲಕಿಯ ಮೇಲೆ ಎರಡು ತಿಂಗಳುಗಳ ಕಾಲ ಐದು ಜನರು ನಿರಂತರ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

18 ಹಾಗೂ 21 ವರ್ಷಗಳ ನಡುವಿನ ಐದು ಮಂದಿ ವ್ಯಕ್ತಿಗಳು ನನ್ನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬಾಲಕಿಯ ತಂದೆ ಶುಕ್ರವಾರ ರಾತ್ರಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಗೋರಖ್‌ಪುರ ಪೊಲೀಸ್ ಅಧೀಕ್ಷಕ ಅರ್ಜುನ್ ಉಯಿಕೆ ಹೇಳಿದ್ದಾರೆ. ಬಾಲಕಿ ಎರಡು ದಿನಗಳ ಹಿಂದೆ ಗರ್ಭಪಾತ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಹರಡಿದ ಬಳಿಕ ಪೋಷಕರು ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಐದು ಮಂದಿ ಹಾಗೂ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಹಾಗೂ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಉಯಿಕೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News