ತೈವಾನ್ ನಲ್ಲಿ ಬೆಂಕಿ ಅಪಘಾತ: ಅಗ್ನಿಶಾಮಕರ ಸಾವು

Update: 2018-04-29 16:37 GMT

ತೈಪೆ (ತೈವಾನ್), ಎ. 29: ಉತ್ತರ ತೈವಾನ್‌ನ ಇಲೆಕ್ಟ್ರಾನಿಕ್ಸ್ ಕಾರ್ಖಾನೆಯೊಂದರಲ್ಲಿ ಶನಿವಾರ ರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ಐವರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ.

ಟಾವೊಯುವನ್ ನಗರದ ಕೈಗಾರಿಕಾ ಜಿಲ್ಲೆಯೊಂದರಲ್ಲಿರುವ ಸರ್ಕೀಟ್ ಬೋರ್ಡ್ ತಯಾರಿಕಾ ಕಂಪೆನಿಯ 8 ಮಹಡಿಗಳ ಕಟ್ಟಡದಲ್ಲಿ ಬೆಂಕಿ ದಾಂಧಲೆ ನಡೆಸಿತು.

ಕಾರ್ಖಾನೆಯೊಳಗೆ ಸಿಕ್ಕಿಕೊಂಡಿರಬಹುದಾದ ಜನರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸುತ್ತಿದ್ದಾಗ ಅವರ ದಾರಿಗಡ್ಡವಾಗಿ ಕಟ್ಟಡದ ಅವಶೇಷಗಳು ಬಿದ್ದು ಒಳಗೆ ಸಿಕ್ಕಿಹಾಕಿಕೊಂಡರು.

ಮೃತಪಟ್ಟ ಉಳಿದ ಇಬ್ಬರು ಕಾರ್ಖಾನೆಯ ಕಾರ್ಮಿಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News