ಮೋದಿ, ಅಂಬೇಡ್ಕರ್ ಬ್ರಾಹ್ಮಣರಂತೆ ಎಂದ ಗುಜರಾತ್ ಸ್ಪೀಕರ್

Update: 2018-04-29 16:39 GMT

ಗಾಂಧಿನಗರ, ಎ. 29: ಪ್ರಧಾನಿ ನರೇಂದ್ರ ಮೋದಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಇಬ್ಬರೂ ಬ್ರಾಹ್ಮಣರಂತೆ ಹಾಗೂ ಕೃಷ್ಣ ಒಬಿಸಿ. ಆತನನ್ನು ಋಷಿ ಸಾಂದೀಪನಿ ದೇವರನ್ನಾಗಿ ಮಾಡಿದರು ಎಂದು ಗುಜರಾತ್ ವಿಧಾನ ಸಭೆ ಸ್ಪೀಕರ್ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ.

 ಗಾಂಧಿನಗರದಲ್ಲಿ ನಡೆದ ಮೇಘಾ ಬ್ರಾಹ್ಮಣ ಸಮಾವೇಶದಲ್ಲಿ ರಾಜೇಂದ್ರ ತ್ರಿವೇದಿ ಮಾತನಾಡಿದರು. ಶಿಕ್ಷಿತ ಬ್ರಾಹ್ಮಣ ಸಮುದಾಯಕ್ಕೆ ಎಂದಿಗೂ ಅಧಿಕಾರದ ಹಸಿವು ಇಲ್ಲ. ಬ್ರಾಹ್ಮಣರು ಚಂದ್ರಗುಪ್ತ ವೌರ್ಯರಂತಹ ರಾಜರು, ಶ್ರೀರಾಮ ಹಾಗೂ ಶ್ರೀಕೃಷ್ಣರಂತಹ ದೇವರು ಯಶಸ್ವಿಯಾಗಲು ಕಾರಣಕರ್ತರಾಗಿದ್ದರು ಎಂದು ತ್ರಿವೇದಿ ಹೇಳಿದ್ದಾರೆ. ‘‘ಬ್ರಾಹ್ಮಣರು ದೇವರನ್ನು ರೂಪಿಸಿದರು. ನಾನು ಯಾವಾಗಲೂ ಹೇಳುತ್ತೇನೆ ಶ್ರೀರಾಮ ಕ್ಷತ್ರೀಯ ಎಂದು. ಆದರೆ, ಆತನನ್ನು ಋಷಿ-ಮುನಿಗಳು ದೇವರನ್ನಾಗಿ ಮಾಡಿದರು’’ ಎಂದು ಸಮಸ್ತ ಗುಜರಾತ್ ಬ್ರಹ್ಮ ಸಮಾಜ್ ಮಹಾತ್ಮಾ ಮಂದಿರದಲ್ಲಿ ಏರ್ಪಡಿಸಿದ್ದ ಉದ್ಯಮ ಸಮಾವೇಶ ಹಾಗೂ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು.

ನಾವಿಂದು ಒಬಿಸಿ ಎಂದು ಹೇಳುವ ಗೋಕುಲದ ಕುರಿ ಮೇಯಿಸುವವ ದೇವರು. ಈ ಒಬಿಸಿ ದೇವರನ್ನು ಯಾರು ರೂಪಿಸಿದರು ? ಅದು ಬ್ರಾಹ್ಮಣನಾದ ಸಾಂದೀಪನಿ ಋಷಿ ಮಾಡಿರುವುದು ಎಂದು ಶ್ರೀಕೃಷ್ಣನನ್ನು ಉಲ್ಲೇಖಿಸದೆ ತ್ರಿವೇದಿ ಹೇಳಿದರು. ಸಂಸ್ಕೃತ ಭಾಷೆಯನ್ನು ಬ್ರಾಹ್ಮಣರು ರಕ್ಷಿಸಿದರು. ಮತ್ಯಕನ್ಯೆ ಪುತ್ರನಾದ ಭಗವಾನ್ ವ್ಯಾಸನನ್ನು ದೇವರನ್ನಾಗಿ ಮಾಡಿರುವುದು ಬ್ರಾಹ್ಮಣರು ಎಂದು ಅವರು ಹೇಳಿದರು. ರಾಜ್ಯ ಸ್ವಾಮಿತ್ವದ ಗುಜರಾತ್ ಕೈಗಾರಿಕೆ ಅಭಿವೃದ್ಧಿ ಮಂಡಳಿ ಪ್ರಾಯೋಜಿತ, ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಅವರು ರಾಜೇಂದ್ರ ತ್ರಿವೇದಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News