ರೈಲು ಢಿಕ್ಕಿ: ಯುವಕ ಮೃತ್ಯು
Update: 2018-04-29 22:28 IST
ಬೈಂದೂರು, ಎ.29: ರೈಲು ಢಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಶನಿವಾರ ರಾತ್ರಿ 11.40ರ ಸುಮಾರಿಗೆ ಕಿರಿಮಂಜೇಶ್ವರ ಗ್ರಾಮದ ನಾಗೂರು ಸಂದೀಪನ್ ಶಾಲೆ ಬಳಿ ನಡೆದಿದೆ.
ಮೃತರನ್ನು ಬಬಲು ಕುಮಾರ್(20) ಎಂದು ಗುರುತಿಸಲಾಗಿದೆ. ಇವರು ರೈಲ್ವೇ ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ರೈಲ್ವೇ ಹಳಿಯ ಮೇಲೆ ಬಿದ್ದರೆನ್ನಲಾಗಿದೆ. ಇದೇ ವೇಳೆ ಕೇರಳದಿಂದ ಚಂಡಿಗಡ ಕಡೆಗೆ ಹೋಗುತ್ತಿದ್ದ ರೈಲು ಹಳಿಯ ಮೇಲೆ ಬಿದ್ದಿದ್ದ ಬಬಲು ಕುಮಾರ್‌ಗೆ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಬಬಲು ಕುಮಾರ ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.