×
Ad

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಮಾನಹಾನಿ: ಇಬ್ಬರ ಬಂಧನ

Update: 2018-04-29 22:33 IST

ಉಡುಪಿ, ಎ.29: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಫೋಟೋ ವನ್ನು ಮಾನಹಾನಿಕರವಾಗಿ ಪ್ರಸಾರ ಮಾಡುತ್ತಿದ್ದ ಇಬ್ಬರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಎ.29ರಂದು ಮುಂಜಾನೆ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಅನಿಲ್ ಶೆಟ್ಟಿ ಹಾರಾಡಿ ಹಾಗೂ ದಿನೇಶ್ ನಾಯ್ಕಿ ಎಂದು ಗುರುತಿಸಲಾಗಿದೆ. ಇವರು ಎ.20ರಂದು ಬೇರೆ ಮಹಿಳೆಯರ ಫೋಟೋ ಜೊತೆ ತನ್ನ ಫೋಟೋವನ್ನು ಸೇರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರವಾಗಿ ಪ್ರಸಾರ ಮಾಡುತ್ತಿದ್ದರೆಂದು ಮಹಿಳೆ ನೀಡಿದ ದೂರಿನಂತೆ ಎ.24ರಂದು ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಇವರಿಗೆ ಮೇ11ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News