×
Ad

ಸಹೋದರರ ಮನೆಗೆ ಕನ್ನ: ಸೊತ್ತು ಕಳವು

Update: 2018-04-29 22:34 IST

ಶಿರ್ವ, ಎ.29: ಪಾದೂರು ಚಂದ್ರನಗರ ಎಂಬಲ್ಲಿ ಎ.28ರಂದು ರಾತ್ರಿ ವೇಳೆ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ನಗ ನಗದನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಚಂದ್ರನಗರದ ಮುಹಮ್ಮದ್ ಶರೀಫ್ ಎಂಬವರ ಮನೆಯ ಎದುರಿನ ಮುಖ್ಯದ್ವಾರದ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬೆಡ್‌ರೂಮಿನ ಕಪಾಟಿ ನಲ್ಲಿದ್ದ ಸುಮಾರು 32 ಗ್ರಾಂ ತೂಕದ ಚಿನ್ನಾಭರಣಗಳ ಸೆಟ್, ಒಂದು ಗ್ರಾಂ ಚಿನ್ನದ ಪರ್ಲ್‌ಸೆಟ್, ಹಾಗೂ 400 ಮೌಲ್ಯದ ದುಬೈ ದೇಶದ ಕರೆನ್ಸಿಯನ್ನು ಕಳವು ಮಾಡಿದ್ದು, ಇವುಗಳ ಒಟ್ಟು ಮೌಲ್ಯ 88,000 ರೂ. ಎಂದು ಅಂದಾಜಿಸಲಾಗಿದೆ.

ನಂತರ ಕಳ್ಳರು ಇವರ ಮನೆಯ ಹಿಂಬದಿಯಲ್ಲಿರುವ ಸಹೋದರ ನ್ಯಾಯ ಮತ್ ಅಲಿ ಎಂಬವರ ಮನೆಯ ಹೆಂಚು ತೆಗೆದು ಒಳನುಗ್ಗಿ ಕಪಾಟು ತೆರೆದು ಅದರಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡುಬಂದಿದೆ. ಆದರೆ ಮನೆಯಲ್ಲಿ ಯಾವ ಸೊತ್ತುಗಳು ಕಳವಾಗಿದೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News