×
Ad

‘ಆಪರೇಷನ್ ತ್ರಿಗೋನ’: ಹೊಸ ತುಳು ಕಿರುಚಿತ್ರದ ಟೀಸರ್ ಬಿಡುಗಡೆ

Update: 2018-04-29 22:50 IST

ಮಂಗಳೂರು, ಎ,29: ಉಪ್ಪಳ ಸಮೀಪದ ಪ್ರತಾಪ್ ನಗರದ ಯುವ ಪ್ರತಿಭೆಗಳ ಹೊಸ ತುಳು ಕಿರುಚಿತ್ರವೊಂದರ ಟೀಸರ್ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಡಾರ್ಕ್ ಕ್ರಿಯೇಶನ್ಸ್ ಅವರ ‘ಆಪರೇಷನ್ ತ್ರಿಗೋನ’ ಎನ್ನುವ ಈ ಕಿರುಚಿತ್ರವನ್ನು ಕೃತಿಕ್ ಕುಮಾರ್ ಆಚಾರ್ಯ ಹಾಗು ಗೋಕುಲ್ ಕೃಷ್ಣನ್ ಆಚಾರ್ಯ ನಿರ್ದೇಶಿಸಿದ್ದಾರೆ. ಈಗಾಗಲೇ ಈ ತಂಡದ ‘ರುಪೀ’ ಹಾಗು ‘ಆಸೆ’ ಎನ್ನುವ ಕಿರುಚಿತ್ರಗಳು ಬಿಡುಗಡೆಗೊಂಡಿವೆ. ಈ ಪೈಕಿ ‘ಆಸೆ’ ಕಿರುಚಿತ್ರವು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತಲ್ಲದೆ ಮುಂಬೈನಲ್ಲಿ ನಡೆದ ಚಿತ್ರೋತ್ಸವಕ್ಕೂ ಆಯ್ಕೆಯಾಗಿತ್ತು. ತುಳುವಿನಲ್ಲಿ ಬಿಡುಗಡೆಯಾದ ಅತ್ಯುತ್ತಮ ಕಿರುಚಿತ್ರಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಗೆ ‘ಆಸೆ’ ಪಾತ್ರವಾಗಿದೆ.

ಇದೀಗ ಈ ತಂಡ ‘ತ್ರಿಗೋನ’ ಎನ್ನುವ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬಂದಿದೆ. ಕೃತಿಕ್ ಕುಮಾರ್ ಆಚಾರ್ಯ ಛಾಯಾಗ್ರಾಹಕರಾಗಿದ್ದು, ಸಂಕಲನವನ್ನೂ ಮಾಡಿದ್ದಾರೆ. ಗೋಕುಲ್ ಕೃಷ್ಣನ್ ಆಚಾರ್ಯ ಅವರ ಸೌಂಡ್ ಡಿಸೈನ್ ಚಿತ್ರಕ್ಕಿದ್ದು, ತೋನ್ಸೆ ಸೃಜನ್ ಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ದೀಕ್ಷಿತ್ ಕುಮಾರ್ ಉಪ್ಪಳ ಅವರ ವಿಎಫ್ ಎಕ್ಸ್ ಚಿತ್ರಕ್ಕಿದ್ದು, ಕಿರಣ್ ಕಂಬ್ರತ್ ಅವರ ಕಥೆಯಿದೆ.

ಚಿತ್ರದಲ್ಲಿ ಜಯರಾಮ್ ಆಚಾರ್ಯ, ಶಿವ, ಮೋಕ್ಷಿತ್ ಶೆಟ್ಟಿ, ಪ್ರವೀಣ್ ಆಚಾರ್ಯ, ನವೀನ್ ಆಚಾರ್ಯ, ಮಂಜು ಶೆಟ್ಟಿ, ಅನಿಲ್ ಎಂ.ಜೆ., ಶಿವರಾಮ ಆಚಾರ್ಯ ಅಭಿನಯಿಸಿದ್ದಾರೆ.

ಈಗಾಗಲೇ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಈ ಕೆಳಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News