ವಿವೇಕಾನಂದ ಪದವಿ ಪೂರ್ವ ಕಾಲೇಜ್‍ಗೆ ಶೇ. 97 ಫಲಿತಾಂಶ

Update: 2018-04-30 12:54 GMT

ಪುತ್ತೂರು,ಎ.30: ಇಲ್ಲಿನ ವಿವೇಕಾನಂದ ಪದವಿ ಪೂರ್ವ ಕಾಲೇಜ್‍ನಲ್ಲಿ ಒಟ್ಟು 1080 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 1046 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಒಟ್ಟು ಶೇಕಡಾ 97 ಫಲಿತಾಂಶವನ್ನು ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ 680 ವಿದ್ಯಾರ್ಥಿಗಳಲ್ಲಿ 659 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ. 97, ವಾಣಿಜ್ಯ ವಿಭಾಗದ 371 ವಿದ್ಯಾರ್ಥಿಗಳಲ್ಲಿ 359 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ. 97 , ಕಲಾ ವಿಭಾಗದ 29 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ. 96 ಫಲಿತಾಂಶ ಪಡೆದುಕೊಂಡಿದೆ. 

ವಿಜ್ಞಾನ ವಿಭಾಗದಲ್ಲಿ 200 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ , 404 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ  ವಾಣಿಜ್ಯ ವಿಭಾಗದಲ್ಲಿ 92 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ  ಮತ್ತು 199 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ , ಕಲಾ ವಿಭಾಗದಲ್ಲಿ 5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ 16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ  ಪಡೆಯುವುದರ ಮೂಲಕ ಒಟ್ಟು 297 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ  ಮತ್ತು 619 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಶಾಂಕ್ ಕಾಲೇಜ್‍ಗೆ ಪ್ರಥಮ:
ವಾಣಿಜ್ಯ ವಿಭಾಗದ ಶಶಾಂಕ್ 592(98.6) ಅಂಕಗಳನ್ನು ಪಡೆದು ಕಾಲೇಜಿನಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಬಂಟ್ವಾಳದ ಸಜಿಪನಡುವಿನ ರಾಘವ ಮತ್ತು ಶಶಿಕಲ ದಂಪತಿಗಳ ಪುತ್ರರಾದ ಶಶಾಂಕ್ ಅವರು ಇಂಗ್ಲೀಷ್ - 94, ಕನ್ನಡ - 98, ಸಂಖ್ಯಾಶಾಸ್ತ್ರ - 100, ಗಣಕವಿಜ್ಞಾನ - 100, ವ್ಯವಹಾರ ಅಧ್ಯಯನ - 100, ಲೆಕ್ಕಶಾಸ್ತ್ರ - 100 ಅಂಕಗಳನ್ನು ಪಡೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News