ಗುರುಪುರ ಕೈಕಂಬ: ಮದ್ರಸ ಅಧ್ಯಾಪಕರಿಂದ ಸ್ವಚ್ಛತಾ ಕಾರ್ಯಕ್ರಮ

Update: 2018-05-04 11:10 GMT

ಕೈಕಂಬ, ಎ. 30: ಸಮಸ್ತ ಜಂ-ಇಯ್ಯತುಲ್ ಮುಅಲ್ಲಿಮೀನ್ ಗುರುಪುರ ರೇಂಜ್, ಸಮಸ್ತ ಮದ್ರಸ ಮ್ಯಾನೇಜ್‌ಮೆಂಟ್ ಗುರುಪುರ ರೇಂಜ್ ಇದರ ವತಿಯಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಹಯೋಗದಲ್ಲಿ ಗುರುಪುರ ಕೈಕಂಬ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಗುರುಪುರ ರೇಂಜ್‌ಗೊಳಪಟ್ಟ ವಿವಿಧ ಮದ್ರಸಗಳ ಅಧ್ಯಾಪಕರು, ಮದ್ರಸ ಮ್ಯಾನೇಜ್‌ಮೆಂಟ್‌ನ ಪದಾಧಿಕಾರಿಗಳು, ಟ್ಯಾಲೆಂಟ್ ಕಾರ್ಯಕರ್ತರು ಗುರುಪುರ ಕೈಕಂಬ ಪರಿಸರದ ರಸ್ತೆಬದಿಯಲ್ಲಿದ್ದ ಕಸಕಡ್ಡಿಗಳನ್ನು ಹೆಕ್ಕಿ ಹಾಗೂ 3 ಬಸ್ ನಿಲ್ದಾಣಗಳನ್ನು ಗುಡಿಸಿ ಶುಚಿಗೊಳಿಸಿದರು. ಮದ್ರಸ ಅಧ್ಯಾಪಕರ ಈ ಮಾದರಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

ಪರಿಸರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಗುರುಪುರ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್‌ನ ಅಧ್ಯಕ್ಷ ಅಬ್ದುಲ್ ಮಜೀದ್ ದಾರಿಮಿ, ಉಪಾಧ್ಯಕ್ಷ ಮುಸ್ತಫಾ ಹನೀಫೀ ಅಡ್ಡೂರು, ಜೊತೆ ಕಾರ್ಯದರ್ಶಿ ಆಸಿಫ್ ಯಮಾನಿ ಸೂರಲ್ಪಾಡಿ, ಖಜಾಂಜಿ ಹಾಜಿ ಆದಂ ಮುಸ್ಲಿಯಾರ್, ಸೂರಲ್ಪಾಡಿ ಖತೀಬ್ ಯು.ಆರ್ ಶರೀಪ್ ದಾರಿಮಿ, ಅಸ್ರಾರ್ ನಗರ ಖತೀಬ್ ಬಿ.ಎಂ ದಾವೂದ್ ದಾರಿಮಿ, ಮೌಲಾನಾ ಅಬೂತಾಜ್ ಮೂಡುಬಿದಿರೆ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಶಾಹುಲ್ ಹಮೀದ್ ಹಾಜಿ ಮೆಟ್ರೊ, ಗುರುಪುರ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ಉಪಾಧ್ಯಕ್ಷ ಎಂ.ಎ. ಅಬೂಬಕರ್ ಮಳಲಿ, ಕಾರ್ಯದರ್ಶಿ ಎಂ.ಜಿ ಶಾಹುಲ್ ಹಮೀದ್ ಗುರುಪುರ, ಸೂರಲ್ಪಾಡಿ ಮಸೀದಿ ಅಧ್ಯಕ್ಷ ಅಬ್ದುಲ್ ಮಜೀದ್ ಹಾಜಿ ಸೂರಲ್ಪಾಡಿ, ಮಳಲಿ ಮಸೀದಿ ಅಧ್ಯಕ್ಷ ಎಂ ಮಾಮು ಮಣೇಲು, ಎಸ್.ಕೆ.ಎಸ್.ಎಸ್.ಎಫ್ ಕೈಕಂಬ ವಲಯ ಮಾಜಿ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾಸ್ಟರ್, ಉಸ್ಮಾನ್ ಹಾಜಿ ಸೂರಲ್ಪಾಡಿ, ಡಿಲಕ್ಸ್ ಇಸ್ಮಾಯಿಲ್ ಹಾಜಿ, ರಿಯಾಝ್ ಮಿಲನ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಅಧ್ಯಕ್ಷ ರಿಯಾಝ್ ಕಣ್ಣೂರು, ಸಲಹೆಗಾರ ರಫೀಕ್ ಮಾಸ್ಟರ್, ಸದಸ್ಯರಾದ ಮಜೀದ್ ತುಂಬೆ, ಅಸ್ಫರ್ ಹುಸೈನ್, ನಕಾಶ್ ಬಾಂಬಿಲ ಭಾಗವಹಿಸಿದ್ದರು.

ಅನ್ವರ್ ಮಝ್ದ, ಹಮೀದ್ ಹಾಜಿ ಚೆರ್ವತ್ ಬೀಡಿ, ಬದ್ರುದ್ದೀನ್ ಕಲ್ಲಗುಡ್ಡೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ವಯಂ ಸೇವಕರಿಗೆ ತಂಪು ಪಾನೀಯ ಮತ್ತು ಹಣ್ಣುಹಂಪಲು ನೀಡಿ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News