×
Ad

ಸಾಧ್ವಿ ಸರಸ್ವತಿ ವಿರುದ್ಧ ಕಾಸರಗೋಡು ಪೊಲೀಸರಿಂದ ಕೇಸು ದಾಖಲು

Update: 2018-04-30 20:24 IST

ಕಾಸರಗೋಡು, ಎ. 30:  ಪ್ರಚೋದನಕಾರಿ ಭಾಷಣ ಮಾಡಿದ ವಿಶ್ವ ಹಿಂದೂ ಪರಿಷತ್ ಮಹಿಳಾ ನಾಯಕಿ ಸಾಧ್ವಿ ಸರಸ್ವತಿ ವಿರುದ್ಧ ಕಾಸರಗೋಡು ಪೊಲೀಸರು ಕೇಸು ದಾಖಲಿಸಿದ್ದಾರೆ.

ಬದಿಯಡ್ಕ ಸ್ಥಳೀಯ ಸಮಿತಿ ಮುಖ್ಯಮಂತ್ರಿಗೆ ನೀಡಿದ ದೂರಿನಾಧಾರದಲ್ಲಿ ಕೇಸು ದಾಖಲಾಗಿದೆ. ಲವ್‌ ಜಿಹಾದ್‌ನೊಂದಿಗೆ ಬರುವವರ ಕೊರಳು ಕತ್ತರಿಸಲು ಸಹೋದರಿಯರಿಗೆ ಕತ್ತಿ ಖರೀದಿಸಿ ಕೊಡಿ ಎಂದು ಸರಸ್ವತಿ ಭಾಷಣದಲ್ಲಿ ಕರೆ ನೀಡಿದ್ದರು ಎಂದು ದೂರಲಾಗಿದೆ.

ಕಾಸರಗೋಡು ಸಮೀಪದ ಬದಿಯಡ್ಕದಲ್ಲಿ ನಡೆದಿದ್ದ ವಿರಾಟ್ ಹಿಂದೂ ಸಮಾಜೋತ್ಸವನ್ನು ಉದ್ಘಾಟಿಸಿ, ಸಾಧ್ವಿ ಪ್ರಚೋದನಕಾರಿಯಾಗಿ ಮಾತಾಡಿದ್ದರು ದೂರಿನಲ್ಲಿ ದಾಖಲಿಸಲಾಗಿದೆ. ಸಾಧ್ವಿ ಸರಸ್ವತಿ ಮಧ್ಯ ಪ್ರದೇಶದವರಾಗಿದ್ದು, ಸನಾತನ್ ಧರ್ಮ ಪ್ರಚಾರ್ ಸೇವಾ ಸಮಿತಿಯ ಅಧ್ಯಕ್ಷೆ ಕೂಡಾ ಅಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News