ಫಲಾಹ್ ಬಾಲಕಿಯರ ಪಿಯು ಕಾಲೇಜಿಗೆ ಶೇ.100 ಫಲಿತಾಂಶ
Update: 2018-04-30 20:40 IST
ಮಂಗಳೂರು, ಎ.30: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ 2017-18ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಲಪಾಡಿ ಕೆ.ಸಿ.ರೋಡ್‌ನ ಫಲಾಹ್ ಬಾಲಕಿಯರ ಪದವಿ ಪೂರ್ವ ಕಾಲೇಜು ಶೇ.100 ಫಲಿತಾಂಶ ದಾಖಲಿಸಿದೆ.
ವಾಣಿಜ್ಯ ಹಾಗೂ ಕಲಾ ವಿಭಾಗದಿಂದ 34 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ ರಮೀಝಾ, ತಾಹಿರಾ, ಹಸೀನಾ, ಸಬ್ರಿಯಾ ಬಾನು, ಮೈಮುನಾ ಮಿಸ್ರಿಯಾ, ತಸ್ರೀನಾ ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 22 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ, ಇಬ್ಬರು ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿ, ನಾಲ್ಕು ಮಂದಿ ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.