ಪಾದುವ ಪಿಯು ಕಾಲೇಜಿಗೆ 91 ಶೇ. ಫಲಿತಾಂಶ
ಮಂಗಳೂರು, ಎ. 30: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಪಾದುವ ಪದವಿಪೂರ್ವ ಕಾಲೇಜು 91 ಶೇ. ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿ 93.30 ಶೇ., ಕಲಾ ವಿಭಾಗದಲ್ಲಿ 86.11 ಶೇ. ವಿಜ್ಞಾನ ವಿಭಾಗದಲ್ಲಿ 83.78 ಶೇ. ಫಲಿತಾಂಶ ದಾಖಲಿಸಿದೆ.
ವಾಣಿಜ್ಯ ವಿಭಾಗದ ಒಲಿವಿಯಾ ಲವಿಟಾ ಲೋಬೊ (575) ಅತ್ಯಧಿಕ ಅಂಕ ಗಳಿಸಿ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಷಯಗಳಲ್ಲಿ ತಲಾ 100 ಅಂಕಗಳನ್ನು ಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿಯೂ ನೀರಜ್ ಶೆಟ್ಟಿ (575) ಅಂಕ ಗಳಿಸಿ ಕಾಲೇಜಿಗೆ ಮೊದಲಿಗರಾಗಿದ್ದಾರೆ. ಗಣಕ ವಿಜ್ಞಾನದಲ್ಲಿ 100 ಅಂಕ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ ಜೋಯಲ್ ಎಂ. (523) ಅಂಕ ಗಳಿಸಿದ್ದಾರೆ.
ಕಾಲೇಜಿನಿಂದ 334 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ವಿಶಿಷ್ಟ ಶ್ರೇಣಿಯಲ್ಲಿ 34 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ, ಪ್ರಥಮ ದರ್ಜೆಯಲ್ಲಿ.190 , ದ್ವಿತೀಯ ದರ್ಜೆಯಲ್ಲಿ 59 , ಮತ್ತು ತೃತೀಯ 19 ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.