×
Ad

ಭಟ್ಕಳ: ದಿ. ನ್ಯೂ ಇಂಗ್ಲೀಷ್ ಪಿ ಯು ಕಾಲೇಜ್ ಶೇ.96 ಫಲಿತಾಂಶ

Update: 2018-04-30 20:47 IST

ಭಟ್ಕಳ, ಎ. 30: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ ದಿ ನ್ಯೂ ಇಂಗ್ಲಿಷ್ ಪಿ ಯು ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆ ಹಾಜರಾದ 194 ವಿದ್ಯಾರ್ಥಿಗಳಲ್ಲಿ 186  ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡಾ 96 ಫಲಿತಾಂಶವನ್ನು ದಾಖಲಿಸಿದೆ.

32 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರೆ, 121 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಪ್ರತಿಕ್ಷಾ ಕಡ್ಲೆ 96.33% ನೊಂದಿಗೆ ಪ್ರಥಮ, ಪಲ್ಲವಿ ಶ್ರೀಧರ ನಾಯ್ಕ 95.33% ನೊಂದಿಗೆ ದ್ವೀತಿಯ ಮತ್ತು ಶ್ರೀರಾಮ ಕಾಮತ 94.5% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಮಮತಾ ಈರಪ್ಪ ನಾಯ್ಕ 94.16% ನೊಂದಿಗೆ ಪ್ರಥಮ, ಸಹನಾ ಪಿ. 91.83% ನೊಂದಿಗೆ ದ್ವಿತೀಯ ಮತ್ತು ಸುರಜ್ ಶೆಟ್ಟಿ 90.50% ನೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಕಲಾ ವಿಭಾಗದಲ್ಲಿ ಭವ್ಯ ಮಾದೇವ ನಾಯ್ಕ 84.16% ನೊಂದಿಗೆ ಪ್ರಥಮ, ಶಬ್ಬೀರ್ ಎಫ್. ಶಾಬಾದ 83.33%  ನೊಂದಿಗೆ ದ್ವೀತಿಯ ಮತ್ತು ವೆಂಕಟೇಶ ಆರ್. 81.83% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ವಿದ್ಯಾರ್ಥಿಗಳಾದ ಮಮತಾ ಈರಪ್ಪ ನಾಯ್ಕ ಮತ್ತು ಚಿತ್ರಾ ಕೆ. ದೇವಾಡಿಗ ಗಣಿತಶಾಸ್ತ್ರ ವಿಷಯದಲ್ಲಿ, ಪ್ರತಿಕ್ಷಾ ಕಡ್ಲೆ ಮತ್ತು ನಾಗರತ್ನ ನಾಯ್ಕ ವ್ಯವಹಾರ ಅಧ್ಯಯನ ವಿಷಯದಲ್ಲಿ, ಶ್ರೀರಾಮ ಕಾಮತ ಮತ್ತು ನೆಹಾಲ ಶ್ಯಾನಭಾಗ ಲೆಕ್ಕಶಾಸ್ತ್ರ ವಿಷಯದಲ್ಲಿ ಹಾಗೂ ಪ್ರಿಯಾಂಕ ಎಸ್. ಸಂಖ್ಯಾಶಾಸ್ತ್ರ ವಿಷಯಗಳಲ್ಲಿ 100/100 ಅಂಕಗಳನ್ನು ಪಡೆದುಕೊಂಡಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುರೇಶ ನಾಯಕ್, ಟ್ರಸ್ಟಿ ಮೆನೇಜರ್ ರಾಜೇಶ ನಾಯಕ್ ಹಾಗೂ ಪ್ರಾಂಶುಪಾಲ ರಾದ ವಿರೇಂದ್ರ ಶ್ಯಾನಭಾಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News