×
Ad

ಪಿಯು ದ್ವಿತೀಯಾ ಫಲಿತಾಂಶ: ಅಂಜುಮನ್ ಬಾಲಕೀಯ ಕಾಲೇಜಿಗೆ ಶೇ.86 ಫಲಿತಾಂಶ

Update: 2018-04-30 20:53 IST

ಭಟ್ಕಳ, ಎ. 30: ಇಲ್ಲಿನ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಬಾಲಕೀಯರ ಪದವಿಪೂರ್ವ ಕಾಲೇಜಿಗೆ ಶೇ.86.07% ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜ್ಞಾನ ವಿಭಾದಲ್ಲಿ 60 ವಿದ್ಯಾರ್ಥಿನಿಯರು, ವಾಣಿಜ್ಯ ವಿಭಾಗದಲ್ಲಿ 119 ಹಾಗೂ ಕಲಾ ವಿಭಾಗದಲ್ಲಿ 62 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 42 ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ, 156 ಪ್ರಥಮ ದರ್ಜೆ, 38 ದ್ವಿತೀಯಾ ದರ್ಜೆ, 5 ವಿದ್ಯಾರ್ಥಿನಿಯರು ತೃತೀಯಾ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು 39 ವಿದ್ಯಾರ್ಥಿನಿಯರು ಅನುತ್ತೀರ್ಣರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸಿರಾಜುನ್ನೀಸಾ ಆಫ್ರೀಖಾ 93.66%, ಸಾಹಿಯಾ ಶಿಂಗೇರಿ 91.16%, ಫಾತೀಮಾ ಐರೀನ್ ಅಕ್ರಮಿ 86.5%, ವಾಣಿಜ್ಯ ವಿಭಾಗದಲ್ಲಿ ನಮ್ರಾ ತಕ್ರೀಮ್ ಹಜೀಬ್ 97.8%, ಉಫೈರಾ ಸನೋಬರ್ ಜೈಲಾನಿ 95.6%, ಫಾತಿಮಾ ರೀನಾ ಅರ್ಮಾರ್ 95.3%, ಕಲಾ ವಿಭಾಗದಲ್ಲಿ ನಾಝ್ಮೀನ್ ಮಲ್ಲಿಗಾರ್ 90%, ಹಾಜಿರಾ ಅಂಜುಮ್ ಕುಂದನಗುಡಾ 86.66%, ಹುದಾ ಇಕ್ಕೇರಿ 89% ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News