ಪಿಯು ಫಲಿತಾಂಶ: ಬಿಂದಿಯಾಗೆ ವಾಣಿಜ್ಯದಲ್ಲಿ 5ನೆ ರ್‍ಯಾಂಕ್
Update: 2018-04-30 21:01 IST
ಮಂಗಳೂರು, ಎ.30: ಸುರತ್ಕಲ್ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿನಿ ಬಿಂದಿಯಾ ಎಲ್. ಶೆಟ್ಟಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ 591 (98.5) ಅಂಕಗಳೊಂದಿಗೆ ರಾಜ್ಯಕ್ಕೆ ಐದನೆ ಸ್ಥಾನವನ್ನು ಪಡೆದಿದ್ದಾರೆ.
ಈಕೆ ಎಸೆಸೆಲ್ಸಿಯಲ್ಲಿ 6ನೆ ರ್‍ಯಾಂಕ್ ಪಡೆದಿದ್ದರು. ಈಕೆ ಸುರತ್ಕಲ್ ಕಟ್ಲ ನಿವಾಸಿ ಲೀಲಾಧರ ಶೆಟ್ಟಿ ಹಾಗೂ ಸುಜಾತ ಶೆಟ್ಟಿ ದಂಪತಿ ಪುತ್ರಿ.
ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ, ಸಂಸ್ಕೃತದಲ್ಲಿ ತಲಾ 100 ಅಂಕಗಳನ್ನು ಪಡೆದಿರುವ ಬಿಂದಿಯಾ, ಅರ್ಥಶಾಸ್ತ್ರದಲ್ಲಿ- 99, ಬಿಸ್ನೆಸ್ ಸ್ಟಡೀಸ್- 99 ಹಾಗೂ ಆಂಗ್ಲ ಭಾಷೆಯಲ್ಲಿ 93 ಅಂಕಗಳನ್ನು ಪಡೆದಿದ್ದಾರೆ.
ಪದವಿ ಜತೆ ಸಿಎ ಮಾಡಬೇಕೆಂಬ ಇರಾದೆ
‘‘ನಾನು ನಿರೀಕ್ಷಿಸಿದಷ್ಟು ಅಂಕ ಬಂದಿದೆ. ಖುಷಿಯಾಗಿದೆ. ಮುಂದೆ ಪದವಿ ಜತೆ ಅಧ್ಯಯನ ಮಾಡಬೇಕೆಂದಿದ್ದೇನೆ’’ ಎಂದು ಬಿಂದಿಯಾ ಹೇಳಿದ್ದಾರೆ.