ಭಟ್ಕಳ: ವಿಷ ಆಹಾರ ಸೇವಿಸಿ 30ಕ್ಕೂ ಅಧಿಕ ಜಾನುವಾರುಗಳ ಸಾವು
ಭಟ್ಕಳ, ಎ. 30: ತಾಲೂಕಿನ ಕಟಗಾರಕೊಪ್ಪ ಹಾಗೂ ಶಿರಾಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿಷ ಆಹಾರ ಸೇವಿಸಿದ ಪರಿಣಾಮ 30ಕ್ಕೂ ಅಧಿಕ ಜಾನುವಾರುಗಳು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಕಟಗಾರಕೊಪ್ಪ ಹಾಗೂ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿ ಭಾಗದಲ್ಲಿ ಹಂದಿ ಸಾಕಣೆ ಕೇಂದ್ರವಿದ್ದು ಹಂದಿಗಳಿಗೆ ಹಾಕುವ ಆಹಾರವನ್ನು ತಿಂದು ಆ ಭಾಗದ ಜಾನುವಾರುಗಳು ಸಾವನ್ನಪ್ಪಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಾಲೂಕು ಪಶು ವೈದ್ಯಾಧಿಕಾರಿ ಡಾ.ಪ್ರದೀಪ್ ಮೇಲ್ನೋಟಕ್ಕೆ ಜಾನುವಾರಗಳ ಸಾವು ವಿಷ ಆಹಾರ ಸೇವೆನೆಯಿಂದ ಉಂಟಾಗಿರಬಹುದೆಂದು ಅಂದಾಜಿಸಲಾಗಿದ್ದು, ಮರಣೋತ್ತರ ವರದಿಯ ನಂತರವಷ್ಟೆ ನಿಖವಾದ ಕಾರಣ ತಿಳಿದುಬರುತ್ತದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಒಂದೆರಡರು ಜಾನುವಾರುಗಳು ಸಾಯುತ್ತಲೇ ಬಂದಿದ್ದು ಈಗ ಒಂದೇ ದಿನ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳು ಮೃತಪಟ್ಟಿದ್ದು ಈ ಭಾಗದ ರೈತರಿಗೆ ತುಂಬಲಾರದ ನಷ್ಟವುಂಟಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.