ಗ್ರೀನ್ ವ್ಯಾಲಿ ಪಿಯು ಕಾಲೇಜ್‌ಗೆ ಶೇ.100 ಫಲಿತಾಂಶ
ಶಿರೂರು, ಎ.30: ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜ್ ಶೇ.100 ಫಲಿತಾಂಶ ಪಡೆದು ಕೊಂಡಿದೆ.
ಗ್ರೀನ್ ವ್ಯಾಲಿ ಕಾಲೇಜ್ ಸತತ 10 ವರ್ಷಗಳಿಂದ ಈ ಸಾಧನೆಯನ್ನೂ ಸಾಧಿಸಿಕೊಂಡು ಬಂದಿದೆ. ಪರೀಕ್ಷೆಗೆ ಹಾಜರಾದ ಎಲ್ಲಾ 76 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದು, ಅದರಲ್ಲಿ 18 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಮುಹಮ್ಮದ್ ಜುಮಾನ್ 570, ಸಬೀಲ್ 561, ಮುಹಮ್ಮದ್ ಹಂಝಾ ಮುಸ್ಬಾ 559 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸೈಯದ್ ಅಶ್ಯುಮ್ 555, ಐಶ್ವರ್ಯಾ ಪಿ. 545, ಅಮ್ಮರ್ ಸೈಯದ್ ಮುಹಮ್ಮದ್ 542 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಸಾಧನೆ ಮಾಡಿದ್ದಾರೆ.
ಅಕ್ದುಸ್ ಕಂಬರ್, ಸೈಯದ್ ಸಲೀಕ್, ಆಯಿಷಾ ಶಬ್ನಾಝ್, ಬಾವ್ಲಾ ನಿದಾ, ಧನ್ಯಾ ವಿ. ಬಾದಲ್, ಹುಸೈನ್ ಫಹೀಮ್, ಇಶಾಕ್ ವಾಝ್, ಮುಹಮ್ಮದ್ ಇಮ್ಮಾದ್, ವೌಲಾನಾ ವಾಸಿಲ್, ಸೈದತುನ್ನೀಸಾ ಸಭಾ, ಸೈಫುಲ್ ಅಮೀನ್ ಬಾಯಿಝೀದ್ ವಿಶಿಷ್ಟ ಶ್ರೇಣಿಯಲ್ಲಿ ಅಂಕ ಪಡೆಯುವುದರೊಂದಿಗೆ ಸಾಧನೆ ಮಾಡಿದ್ದಾರೆ.