×
Ad

ಹೆಬ್ರಿ: ಚೆಕ್‌ಪೋಸ್ಟ್ ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಮುನ್ನುಗಿದ ಟೆಂಪೋ ಟ್ರಾವೆಲ್ಲರ್

Update: 2018-05-01 00:28 IST

ಹೆಬ್ರಿ, ಎ.30: ಹೆಬ್ರಿ ಸಮೀಪದ  ಸೋಮೇಶ್ವರ ಚೆಕ್‌ಪೋಸ್ಟ್ ಬಳಿ ಇಂದು ಸಂಜೆ ವೇಳೆ ಆಗುಂಬೆ ಘಾಟಿಯಿಂದ ಬರುತ್ತಿದ್ದ ಟೆಂಪೋ ಟ್ರಾವೆಲರೊಂದು ಬ್ರೇಕ್ ಫೇಲ್ ಆಗಿ ಚೆಕ್‌ಪೋಸ್ಟ್ ಬ್ಯಾರಿಕೇಡ್‌ಗಳನ್ನು ತಳ್ಳಿಕೊಂಡು ಮುನ್ನುಗಿರುವ ಬಗ್ಗೆ ವರದಿಯಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ  ಸೋಮೇಶ್ವರದಲ್ಲಿ ಚೆಕ್‌ಫೋಸ್ಟ್ ನಿರ್ಮಿಸಲಾಗಿದ್ದು ಇಲ್ಲಿ ಅಧಿಕಾರಿಗಳು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು.

ಆ ವೇಳೆ ಆಗುಂಬೆ ಕಡೆಯಿಂದ ಬೆಂಗಳೂರಿನ ಕೇಗೆಂರಿ ಮೂಲದ ವೆಂಕಟೇಶ್‌ ರಾಜು (26) ಚಲಾಯಿಸಿಕೊಂಡು ಬಂದ ಟೆಂಪೊ ಚೆಕ್ ಪೋಸ್ಟ್ ನಲ್ಲಿ ನಿಂತಿದ್ದ ವಾಹನಗಳ ಮಧ್ಯೆ ಬ್ಯಾರಿಕೇಡ್ ತಳ್ಳಿ ಕೊಂಡು ಮುಂದೆ ಸಾಗಿತು. ಇದರಿಂದ ಭದ್ರತಾ ಸಿಬ್ಬಂದಿಗಳು, ವಾಹನ ಚಾಲಕರು ಗಾಬರಿಗೊಂಡರು. ಈ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಚಾಲಕನ ಸಮಯಪ್ರಜ್ಞೆಯಿಂದ ಸಂಭವೀಯ ಅವಘಡವೊಂದು ತಪ್ಪಿದಂತಾಗಿದೆ. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ ಮತ್ತು ಯಾವುದೇ ಹಾನಿಯಾಗಿಲ್ಲ.  ಇದು ಬ್ರೇಕ್ ಫೇಲ್‌ನಿಂದ ಸಂಭವಿಸಿದ ಘಟನೆ ಎಂದು ಎಸ್ಪಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News