ಕೋಟ ವಿವೇಕ ಪದವಿ ಪೂರ್ವ ಕಾಲೇಜು: ಆಯಿಷತ್ ನಿಶ್ಮಾಗೆ 536 ಅಂಕ
Update: 2018-05-01 13:06 IST
ಉಡುಪಿ, ಮೇ 1: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೋಟ ವಿವೇಕ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯಾದ ಆಯಿಷತ್ ನಿಶ್ಮಾ ವಿಜ್ಞಾನ ವಿಭಾಗದಲ್ಲಿ ಒಟ್ಟು 536 ಅಂಕಗಳನ್ನು ಪಡೆದು 89.30 ಸರಾಸರಿಯೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
ವಿಜ್ಞಾನ ವಿಭಾಗದ ಕನ್ನಡ 97, ಇಂಗ್ಲಿಷ್ 86, ಭೌತಶಾಸ್ತ್ರ 91, ರಸಾಯನಶಾಸ್ತ್ರ 86, ಜೀವಶಾಸ್ತ್ರ 88, ಗಣಿತದಲ್ಲಿ 88 ಅಂಕಗಳು ಲಭಿಸಿದೆ. ಈಕೆ ಕೋಟತಟ್ಟು ಪಡುಕರೆಯ ಹುಸೈನ್ ಮತ್ತು ಝೈನಬಾ ದಂಪತಿಯ ಪುತ್ರಿ.