×
Ad

ನಿಮ್ಮ ಈ ಪ್ರೀತಿಯನ್ನು ಅಭಿವೃದ್ಧಿ ಮೂಲಕ ಹಿಂದಿರುಗಿಸುತ್ತೇನೆ: ಉಡುಪಿಯಲ್ಲಿ ಪ್ರಧಾನಿ ಮೋದಿ

Update: 2018-05-01 15:58 IST

ಉಡುಪಿ, ಮೇ 1: ಕರಾವಳಿಯು ಪರಶುರಾಮನ ಸೃಷ್ಟಿಯಾಗಿದ್ದು, ಶಿಕ್ಷಣ ಸೇರಿ ಹಲವು ಕ್ಷೇತ್ರಗಳಲ್ಲಿ ಉಡುಪಿ ಜಿಲ್ಲೆ ಅಪೂರ್ವ ಸಾಧನೆ ಮಾಡಿದೆ. ಕರಾವಳಿಯ ಜನರ ಪ್ರೀತಿಯನ್ನು ಅಭಿವೃದ್ಧಿಯ ಮೂಲಕ ಹಿಂದಿರುಗಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಳಿದರು.

ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಖಂಡನೀಯವಾಗಿದ್ದು, ನಾವೆಲ್ಲರೂ ಅದನ್ನು ವಿರೋಧಿಸಬೇಕು ಎಂದರು.

ಮಾಜಿ ಪ್ರಧಾನಿ ದೇವೇಗೌಡ ಹಿರಿಯ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದು, ಈಗಲೂ ಅವರು ನನ್ನ ಭೇಟಿಗೆ ಬಂದರೆ ನಾನೇ ಅವರನ್ನು ಖುದ್ದಾಗಿ ಸ್ವಾಗತಿಸುತ್ತೇನೆ. ಆದರೆ ಕಾಂಗ್ರೆಸ್ ನಾಯಕರು ಅವರನ್ನು ಅವಮಾನಿಸುತ್ತಾರೆ ಎಂದರು. 

ಭಾಷಣದ ಕೊನೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರಧಾನಿ, "ಬನ್ನಿ, ಎಲ್ಲರೂ ಕೈಜೋಡಿಸಿ. ಸರ್ಕಾರ್ ಬದ್ಲಿಸಿ (ಸರಕಾರ ಬದಲಿಸಿ), ಬಿಜೆಪಿ ಗೆಲ್ಲಿಸಿ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News