ಕೋಮುವಾದ ಕಾರ್ಮಿಕರ ದೊಡ್ಡ ಶತ್ರು: ವಿ. ಕುಕ್ಯಾನ್
ಮಂಗಳೂರು, ಮೇ 1: ಕೋಮುವಾದ ಕಾರ್ಮಿಕರ ಮತ್ತು ಜನಸಾಮಾನ್ಯರ ದೊಡ್ಡ ಶತ್ರು. ನಮ್ಮ ಸಂವಿಧಾನದ ಆಶಯದೊಂದಿಗೆ ಮಾತ್ರ ಭಾರತದ ಬೆಳವಣಿಗೆ ಸಾಧ್ಯ. ಈ ಸಂವಿಧಾನವನ್ನು ಬದಲಿಸಲು ಪ್ರಯತ್ನಿವವರು ದೇಶವಿರೋಧಿಗಳು. ಆದುದರಿಂದ ಅಂತಹ ಶಕ್ತಿಗಳನ್ನು ಕರ್ನಾಟಕದಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಹಿಮ್ಮೆಟ್ಟಿಸಿ ಪ್ರಜಾಪ್ರಭುತ್ವವಾದಿಗಳಿಗೆ ಮತ ನೀಡಬೇಕು ಎಂದು ಎಐಟಿಯುಸಿ ಮುಂದಾಳು ವಿ ಕುಕ್ಯಾನ್ ಕರೆ ನೀಡಿದರು.
ಅವರು ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಮಂಗಳೂರಿನ ಹೊಯ್ಗೆ ಬಜಾರ್ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಮೇ ದಿನಾಚರಣೆಯ ಸಂದರ್ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಿರಿಯ ಕಾರ್ಮಿಕ ಮುಂದಾಳು ಕಲ್ಯಾಣಿ ಕೊಟ್ಟಾರ ದ್ವಜಾರೋಹಣ ನಡೆಸಿ ಮೇ ದಿನದ ಮಹತ್ವವನ್ನು ನೆನಪಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿ ಕೋಶಾಧಿಕಾರಿ ಪ್ರಭಾಕರ ರಾವ್ ವಹಿಸಿದ್ದರು. ಎಚ್. ವಿ. ರಾವ್ ಸ್ವಾಗತಿಸಿ, ಸೀತಾರಾಮ ಬೇರಿಂಜೆ ವಂದಿಸಿದರು. ಕರುಣಾಕರ, ಕುಮಾರಿ ಚಿತ್ರಾಕ್ಷಿ, ಶಿವಪ್ಪ ಕೋಟ್ಯಾನ್, ತಿಮ್ಮಪ್ಪ ಕಾವೂರು ಮುಂತಾದವರು ಸಬೆಯಲ್ಲಿ ಉಪಸ್ಥಿತರಿದ್ದರು.