×
Ad

ಅತ್ತಾವರದಲ್ಲಿ ಜೆ.ಆರ್.ಲೋಬೊ ಮತಯಾಚನೆ

Update: 2018-05-01 17:54 IST

ಮಂಗಳೂರು, ಮೇ 1: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಮಂಗಳವಾರ ನಗರದ ಬಾಬುಗುಡ್ಡೆ ಅತ್ತಾವರದ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಭೇಟಿ ನೀಡಿದರಲ್ಲದೆ, ಈ ಪರಿಸರದಲ್ಲಿರುವ ಸುಮಾರು 200ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಿದರು.

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲೀಮ್, ಕಾರ್ಪೊರೇಟರ್ ಶೈಲಜಾ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಮೆಸ್ಕಾಂ ನಿರ್ದೇಶಕ ಸದಾಶಿವ ಅಮೀನ್, ವಾರ್ಡ್ ಅಧ್ಯಕ್ಷ ಜಯಂತ್ ಪೂಜಾರಿ, ವಿಜಯಲಕ್ಷ್ಮೀ, ಸುರೇಶ್ ಶೆಟ್ಟಿ, ಪ್ರಭಾಕರ್ ಶ್ರೀಯಾನ್, ಹೃದಯನಾಥ, ಹೊನ್ನಯ್ಯ, ಶ್ಯಾಮ ಕರ್ಕೇರ, ದಿನೇಶ್ ಪಿ.ಎಸ್, ಭಾಸ್ಕರ್ ರಾವ್, ಮುಹಮ್ಮದ್ ನವಾಝ್, ವಿದ್ಯಾ, ಕೀರ್ತಿರಾಜ್, ಪ್ರಶಾಂತ, ನಿತೇಶ್, ಗೀತಾ, ಮೀನಾ ಮಲಾನಿ, ಸತೀಶ್ ಪೂಜಾರಿ, ಜಯರಾಜ್, ಪ್ರದೀಪ್ ಕೃಷ್ಣ, ಶ್ರೀಧರ್, ಪ್ರಭಾಕರ, ವಸಂತ ದೇವಾಡಿಗ, ತೌಫೀಕ್, ರವೀಂದ್ರನಾಥ, ರಘುನಾಥ, ಅಶೋಕ ಕುಡ್ಪಾಡಿ, ಕರುಣಾಕರ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News