×
Ad

ಜೆಇಇ ಮೈನ್ಸ್: ಆಳ್ವಾಸ್‌ನ 643 ವಿದ್ಯಾರ್ಥಿಗಳು ಅಡ್ವಾನ್ಸ್‌ಗೆ ಆಯ್ಕೆ

Update: 2018-05-01 19:53 IST

ಮೂಡುಬಿದಿರೆ, ಮೇ 1: ಜೆಇಇ ಮೈನ್ಸ್-2018 ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ 643 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಗೆ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಜೆಇಇ ಅಡ್ವಾನ್ಸ್‌ಗೆ ಅತೀ ಹೆಚ್ಚು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎನ್ನುವ ಹೆಗ್ಗಳಿಕೆಗೆ ಆಳ್ವಾಸ್ ಪಾತ್ರವಾಗಿದೆ.

ಟಾಪರ್ಸ್‌: ಶಶಾಂಕ್ ಡಿ. (199ಅಂಕ), ಸಚಿನ್ ಕುಮಾರ್(183), ಮಿಥುನ್ ಕಂಪಲೆ(177), ಲಕ್ಷ್ಮೀಶ ಎಸ್.ಎನ್(175), ಅಭಿಷೇಕ್ ಡಿ.ಎಂ (161), ನವನೀತ್ ಪಿ.(159), ತರುಣ್ ವಿಜಯಾನಂದ (158), ಗೌತಮ ಬುದ್ಧ (154), ಅರ್ಜುನ್ ವಿ (144), ಆಕಾಶ್ ಎನ್ (142), ಶಿವರಾಜ್ ಎಸ್.ಎಸ್ (139), ಸೌರವ ಪಪ್ತಿ(137), ಪ್ರಸನ್ನ ಭಟ್(131), ಧನ್ಯಾ ಉಡುಪ(130), ಶುಶ್ರುತ್(127), ಆನಂದ ಜಿ.ಎನ್(125), ಮಹೇಶ್ ಕೊಪ್ಪದ್(121), ಯೌಗೇಶ್ ರೆಡ್ಡಿ 120 ಅಂಕಗಳನ್ನು ಗಳಿಸಿದ್ದಾರೆ.

ಎಸ್‌ಸಿ ರ್ಯಾಂಕ್ ಪಟ್ಟಿಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಗೌತಮ ಬುದ್ಧ 312ನೇ ರ್ಯಾಂಕ್, ಎಸ್‌ಟಿ ಕೆಟಗರಿಯಲ್ಲಿ ಪದ್ಮಾವತಿ ಎಂ.ಪಿ 367ನೇ ರ್ಯಾಂಕ್, ಗುಣಶೀಲ 546ನೇ ರ್ಯಾಂಕ್ ಸ್ನೇಹಾ ಪಿ. 745ನೇ ರ್ಯಾಂಕ್ ಪಡೆದಿದ್ದಾರೆ.

ಭಿನ್ನ ಸಾಮರ್ಥ್ಯದ ವಿದ್ಯಾರ್ಥಿ ಕೆಟಗರಿಯಲ್ಲಿ ಶ್ರೀಯಾ ಪಾಶ್ವನಾಥ್ ರೈಕರ್ 188ನೇ ರ್ಯಾಂಕ್, ಪ್ರತೀಕ್ಷಾ ಬಸಪ್ಪ ಪಾಟೀಲ್ 240ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News