×
Ad

ಉಡುಪಿ: ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆಗೆ ಪ್ರಧಾನಿ ಮೋದಿಯಿಂದ ಅವಮಾನ ?

Update: 2018-05-01 20:30 IST

ಉಡುಪಿ, ಮೇ 1: ಉಡುಪಿ ಎಂಜಿಎಂ ಮೈದಾನದಲ್ಲಿ ಮಂಗಳವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವಮಾನಿಸಿದ್ದಾರೆ ಎನ್ನಲಾದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನರೇಂದ್ರ ಮೋದಿ ವೇದಿಕೆಗೆ ಬರುತ್ತಿದ್ದಂತೆ ಸಂಸದೆ ಶೋಭಾ ಕರಂದ್ಲಾಜೆ ನಮಸ್ಕರಿಸಿದರು. ನಂತರ ಕೋಟ ಶ್ರೀನಿವಾಸ ಪೂಜಾರಿ, ಉದಯ ಕುಮಾರ್ ಶೆಟ್ಟಿ ಕೈ ಕುಲುಕಿದ್ದರು. ಬಳಿಕ ಜಯಪ್ರಕಾಶ್ ಹೆಗ್ಡೆ ಮೋದಿಯ ಬಳಿ ಬಂದು ನಮಸ್ಕರಿಸಿ ಕೈ ಕೊಡಲು ಮುಂದಾದರೂ ಮೋದಿ ಹೆಗ್ಡೆ ಅವರ ಮುಖ ಕೂಡಾ ನೋಡದೇ ಮುಂದೆ ಸಾಗಿದರು. ಬಳಿಕ ಬಂದ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಎಲ್ಲಾ ಮುಖಂಡರಿಗೂ ಮೋದಿ ಕೈ ಕೊಟ್ಟು ನಮಸ್ಕರಿಸಿದ್ದಾರೆ.

ಈ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೋದಿ ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಅವಮಾನವಾಗಿದೆ ಎನ್ನುವ ವೀಡಿಯೊ ವೈರಲ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News