ಲಕ್ನೋ ವಿವಿಯಲ್ಲಿ ಸ್ನಾತಕೋತ್ತರ ಪದವಿ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯ

Update: 2018-05-01 15:39 GMT

ಹೊಸದಿಲ್ಲಿ, ಮೇ 1: ಎನ್ ಇಇಟಿ  ಮತ್ತಿತರ  ಪ್ರವೇಶ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲವೆಂದು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಮಧ್ಯಾಂತರ ಆದೇಶ ನೀಡಿದ್ದರೂ, ಲಕ್ನೋ ವಿಶ್ವವಿದ್ಯಾಲಯವು ಸ್ನಾತಕೋತ್ತರ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು   ಆಧಾರ್  ಹೊಂದಿರಬೇಕಾಗುತ್ತದೆ.

ಸ್ನಾತಕೋತ್ತರ ಪದವಿ  ತರಗತಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕಳೆದ ಎಪ್ರಿಲ್ ನಲ್ಲಿ ಆರಂಭವಾಗಿದೆ. ಅರ್ಜಿಯೊಂದಿಗೆ ಆಧಾರ್  ಜೆರಾಕ್ಸ್ ಪ್ರತಿ ಸಲ್ಲಿಸಬೇಕಾಗಿದೆ.

ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶ ಕೋರಿ ಬರುವ ಅಭ್ಯರ್ಥಿಗಳು  ಪ್ರವೇಶ ಸಂಯೋಜಕರನ್ನು  ಭೇಟಿಯಾಗಲು ಅವರಲ್ಲಿ ಆಧಾರ್ ಇರಬೇಕಾಗುತ್ತದೆ.  ಆದರೆ   ಆಧಾರ್ ಇಲ್ಲದವರನ್ನು ನಾವು ಹಿಂದಕ್ಕೆ ಕಳುಹಿಸಿಲ್ಲ. ಆಧಾರ್ ಇಲ್ಲದವರು ಸಂಯೋಜಕರಿಗೆ ಈ ಸಂಬಂಧ ಅರ್ಜಿ ಸಲ್ಲಿಸಿ ತಮ್ಮ ಗುರುತನ್ನು ದೃಢಪಡಿಸಬೇಕಾಗಿದೆ ಎಂದು ವಿವಿಯ ರಿಜಿಸ್ಟಾರ್ ರಾಜ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News