×
Ad

ನಿಮ್ಮ ಅವಧಿಗಿಂತ ಮೊದಲು 5.5 ಲಕ್ಷ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದು ಯಾರು?

Update: 2018-05-01 22:40 IST

ಹೊಸದಿಲ್ಲಿ, ಮೇ 1: ತನ್ನ ಆಡಳಿತಾವಧಿಯಲ್ಲಿ ದೇಶದ ಎಲ್ಲಾ ಹಳ್ಳಿಗಳೂ ವಿದ್ಯುದೀಕರಣಗೊಂಡಿದೆ ಎನ್ನುವ ಪ್ರಧಾನಿ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ಮೋದಿ ಅಧಿಕಾರಕ್ಕೂ ಬರುವ ಮೊದಲು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಯ ಕಾರ್ಯ ನಡೆಸಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

“18,452 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಿದ ನಂತರ ಎಲ್ಲಾ 5,97,464 ಗ್ರಾಮಗಳು ವಿದ್ಯುದೀಕರಣಗೊಂಡಿದೆ ಎಂದು ಮೋದಿ ಹೇಳುತ್ತಾರೆ. ಒಳ್ಳೆಯದು. ಆದರೆ ಅವರು ಅಧಿಕಾರಕ್ಕೆ ಬರುವ ಮೊದಲು 5,79,012 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದು ಯಾರು ಎಂದು ಪ್ರಧಾನಿ ತಿಳಿಸಬೇಕು” ಎಂದು ಚಿದಂಬರಂ ಕುಟುಕಿದ್ದಾರೆ.

“2013ರ ಅಕ್ಟೋಬರ್ ನಲ್ಲಿ 5,61,613 ಗ್ರಾಮಗಳು ವಿದ್ಯುದೀಕರಣಗೊಂಡಿತ್ತು ಎನ್ನುವುದು ಸತ್ಯವಲ್ಲವೇ?” ಎಂದವರು ಪ್ರಶ್ನಿಸಿದ್ದಾರೆ.

“65 ವರ್ಷಗಳಲ್ಲಿ ಏನೂ ಮಾಡಿಲ್ಲ” ಎನ್ನುವ ಮೋದಿ ಹೇಳಿಕೆಯನ್ನು ಉಲ್ಲೇಖಿಸಿದ ಅವರು ಏನೂ ಮಾಡಿಲ್ಲ ಎಂದಾದರೆ ಇತರ ಗ್ರಾಮಗಳು ವಿದ್ಯುದೀಕರಣಗೊಂಡಿದ್ದು ಹೇಗೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News