×
Ad

ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ ವಂಚಿಸಿದ ಮೋದಿ: ಉಮ್ಮನ್ ಚಾಂಡಿ

Update: 2018-05-02 23:09 IST

ಮಂಗಳೂರು, ಮೇ 2: ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸದೆ ಪ್ರಧಾನ ಮೋದಿ ಈ ದೇಶದ ಜನರನ್ನು ವಂಚಿಸಿದ್ದಾರೆ ಎಂದು ಕೇರಳದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನೇತಾರ ಉಮ್ಮನ್ ಚಾಂಡಿ ಆರೋಪಿಸಿದ್ದಾರೆ.

ನಗರದ ಬಲ್ಮಠ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತರುತ್ತೇನೆ. ಪ್ರತಿಯೊಬ್ಬನ ಖಾತೆಗೆ ಹಣ ತುಂಬತ್ತೇನೆ ಎಂದೆಲ್ಲಾ ಭರವಸೆ ನೀಡಿದ ಮೋದಿ 4 ವರ್ಷಗಳಲ್ಲಿ ಯಾವ ಭರವಸೆಯನ್ನು ಈಡೇರಿಸದೇ ಇರುವುದು ಮಾತ್ರವಲ್ಲಿ ಜನ ಸಾಮಾನ್ಯರು ಬ್ಯಾಂಕಿನಲ್ಲಿಟ್ಟಿರುವ ತಮ್ಮ ಹಣವನ್ನು ತೆಗೆಯಲಾಗದ ಸ್ಥಿತಿಯನ್ನು ದೇಶದ ಜನರಿಗೆ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಉಂಟು ಮಾಡಿದ್ದಾರೆ ಎಂದು ಉಮ್ಮನ್ ಚಾಂಡಿ ಹೇಳಿದರು.

ಕರ್ನಾಟಕದಲ್ಲಿ ಸ್ಥಿರ ಮತ್ತು ಅಭಿವೃದ್ಧಿ ಪರವಾದ ಸರಕಾರ ರಚನೆ ಕಾಂಗ್ರೆಸ್ ಮೂಲಕ ಮಾತ್ರ ನಡೆದಿದೆ. ಮೊದಲು ಬಿಜೆಪಿ ಅಧಿಕಾರದಲ್ಲಿದ್ದಾಗ ವರ್ಷಕ್ಕೆ ಒಬ್ಬ ಮುಖ್ಯ ಮಂತ್ರಿಯಾಗಿ ಕರ್ನಾಟಕದಲ್ಲಿ ಬದಲಾಗುತ್ತಿದ್ದರು.ರಾಜ್ಯದಲ್ಲಿ 5 ವರ್ಷ ಸ್ಥಿರವಾದ ಸರಕಾರ ರಚಿಸಿ ಅಭಿವೃದ್ಧಿಗೆ ಕಾರಣವಾದ ಸರಕಾರವನ್ನು ಮಗದೊಮ್ಮೆ ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಉಮ್ಮನ್ ಚಾಂಡಿ ತಿಳಿಸಿದ್ದಾರೆ.

ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕು ಎನ್ನುವುದು ಬಿಜೆಪಿಯ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತೊಮ್ಮೆ ಕರ್ನಾಟಕದಲ್ಲಿ ಕಾಂಗ್ರೆಸನ್ನು ಜನ ಬೆಂಬಲಿಸಬೇಕಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣು ನಾಥ್, ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News