×
Ad

ಜಿನ್ನಾ ಭಾವಚಿತ್ರ ಪ್ರದರ್ಶನದ ಜೊತೆಗೆ ಗೋಡ್ಸೆ ಹೆಸರಿನ ದೇವಸ್ಥಾನಗಳನ್ನೂ ವಿರೋಧಿಸಬೇಕು: ಜಾವೇದ್ ಅಖ್ತರ್

Update: 2018-05-03 15:21 IST

ಹೊಸದಿಲ್ಲಿ, ಮೇ 3: ಆಲಿಘರ್ ಮುಸ್ಲಿಮ್ ವಿವಿಯಲ್ಲಿ ಮುಹಮ್ಮದ್ ಅಲಿ ಜಿನ್ನಾರ ಭಾವಚಿತ್ರ ಪ್ರದರ್ಶಿಸುವುದು ನಾಚಿಕೆಗೇಡಿನ ವಿಷಯವಾಗಿದೆ. ಆದರೆ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರು ಗಾಂಧಿ ಹಂತಕ ಗೋಡ್ಸೆಗಾಗಿ ಕಟ್ಟಲ್ಪಟ್ಟ ದೇವಸ್ಥಾನಗಳನ್ನೂ ವಿರೋಧಿಸಬೇಕು ಎಂದು ಸಾಹಿತಿ ಜಾವೇದ್ ಅಖ್ತರ್ ಹೇಳಿದ್ದಾರೆ.

ಆಲಿಘರ್ ಮುಸ್ಲಿಮ್ ವಿವಿಯಲ್ಲಿ ಪಾಕ್ ಸ್ಥಾಪಕ ಜಿನ್ನಾರ ಫೊಟೊ ಪ್ರದರ್ಶಿಸಿದ ವಿಷಯಕ್ಕೆ ಸಂಬಂಧಿಸಿ ವಿದ್ಯಾರ್ಥಿ ಗುಂಪುಗಳ ನಡುವೆ ಹಿಂಸಾಚಾರ ನಡೆದಿತ್ತು.

ಈ ಬಗ್ಗೆ ಟ್ವೀಟ್ ಮಾಡಿರುವ ಜಾವೇದ್ ಅಖ್ತರ್, “ಜಿನ್ನಾ ಆಲಿಘರ್ ವಿವಿಯ ವಿದ್ಯಾರ್ಥಿಯೂ ಆಗಿರಲಲ್ಲ. ಶಿಕ್ಷಕನೂ ಆಗಿರಲಿಲ್ಲ. ಅವರ ಭಾವಚಿತ್ರವನ್ನು ಇಲ್ಲಿ ಪ್ರದರ್ಶಿಸುವುದು ನಾಚಿಕೆಗೇಡಿನ ವಿಷಯ. ವಿವಿ ಆಡಳಿತ ಹಾಗು ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ಭಾವಚಿತ್ರವನ್ನು ಅಲ್ಲಿಂದ ತೆರವುಗೊಳಿಸಬೇಕು. ಆದರೆ ಈ ಬಗ್ಗೆ ಪ್ರತಿಭಟನೆ ನಡೆಸುತ್ತಿರುವವರು ಗೋಡ್ಸೆ ಗೌರವಾರ್ಥ ಕಟ್ಟಿರುವ ದೇವಸ್ಥಾನಗಳನ್ನೂ ವಿರೋಧಿಸಬೇಕು” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News