×
Ad

ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ಖುಷಿಗಳು ಅರಳಲಿ: ಸಿಇಒ ಕಾಪಶಿ

Update: 2018-05-03 19:48 IST

ಉಡುಪಿ, ಮೇ 3: ಜಿಲ್ಲಾ ಬಾಲಭವನದಲ್ಲಿ ರಜಾ ದಿನದ ಬೇಸಿಗೆ ಶಿಬಿರ ಮಕ್ಕಳ ಆಸಕ್ತಿಯ ಕಲಿಕೆಗೆ ಪೂರಕವಾಗಲಿ. ಶಿಬಿರಗಳಲ್ಲಿ ಮಕ್ಕಳು ಖುಷಿಯಾಗಿರಿ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.

 ನಗರದ ಬಾಲಭವನದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಬಾಲಭವನ ಸೊಸೈಟಿಯ ಜಂಟಿ ಸಹಯೋಗದಲ್ಲಿ ಗುರುವಾರದಿಂದ ಆಯೋಜಿಸಲಾದ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
 ರಜಾ ಶಿಬಿರಗಳು ಸಜೆಗಳಾಗದೆ ಮಕ್ಕಳಲ್ಲಿರುವ ಪ್ರತಿಭೆಯನ್ನು ವಿಕಸಿಸುವ, ಅವರಿಗೆ ಮುದ ನೀಡುವ ಕಾರ್ಯಕ್ರಮಗಳಿಗೆ ಪೂರಕವಾಗಿರಲಿ. ಸ್ಪರ್ಧೆಗಳಿಲ್ಲದೆ ನಿರ್ಯೋಚನೆಯಿಂದ ಮಕ್ಕಳು ತಮ್ಮಿಷ್ಟದಂತೆ ನಲಿಯಲಿ ಎಂದು ಅವರು ಶುಭ ಹಾರೈಸಿದರು.
 
ಶಿಬಿರವನ್ನು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಆಯೋಜನೆ ಮತ್ತು ಉದ್ದೇಶದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವೀಸ್ ವಿವರಿಸಿದರು. ಸಿಡಿಪಿಒ ವೀಣಾ ಸ್ವಾಗತಿಸಿ ನಿರೂಪಿಸಿದರು. ಶಿಬಿರವನ್ನು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ. ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಆಯೋಜನೆ ಮತ್ತು ಉದ್ದೇಶದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವೀಸ್ ವಿವರಿಸಿದರು. ಸಿಡಿಪಿಒ ವೀಣಾ ಸ್ವಾಗತಿಸಿ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ್, ಹೇಮಲತಾ, ಮಂಜುನಾಥ್ ಉಪಸ್ಥಿತರಿದ್ದರು. ಜಿಲ್ಲಾ ಬಾಲಭವನದ ಸದಾನಂದ ಅಡಿಗ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News