ಉಳ್ಳಾಲದಲ್ಲಿ ಜೆಡಿಎಸ್ ಅಭ್ಯರ್ಥಿ ಅಶ್ರಫ್ ಬೆಂಬಲಿಗರ ರೋಡ್ ಶೋ
ಉಳ್ಳಾಲ, ಮೇ 3: ಜೆಡಿಎಸ್ ಅಭ್ಯರ್ಥಿ ಅಶ್ರಫ್ ಮತ್ತವರ ಬೆಂಬಲಿಗರ ರೋಡ್ ಶೋ ಕಾರ್ಯಕ್ರಮವು ಉಳ್ಳಾಲದಾದ್ಯಂತ ಬುಧವಾರ ನಡೆಯಿತು. ಉಳ್ಳಾಲ ಸುತ್ತಮುತ್ತ ರೋಡ್ ಶೋ ಮತ್ತು ಮನೆ ಮನೆಗೆ ಭೇಟಿ ನೀಡಿದ ಜೆಡಿಎಸ್ ಅ್ಯಭ್ಯರ್ಥಿ ಅಶ್ರಫ್ ಮತಯಾಚನೆ ನಡೆಸಿದರು.
ಖಾದರ್ ಸಚಿವರಾಗಿದ್ದರೂ ಕೂಡಾ ಅವರ ಕ್ಷೇತ್ರಕ್ಕಾಗಿ ಮಾಡಿದ್ದೇನು ಇಲ್ಲ. ಅಭಿವೃದ್ಧಿಯೇ ಹರಿಕಾರ ಎಂದು ಸಾರಿದ್ದು ಮಾತ್ರ. ಒಂದೆರಡು ರಸ್ತೆ ಬಿಟ್ಟರೆ ಬೇರೆ ಅಭಿವೃದ್ಧಿ ಕೆಲಸ ಆಗಿಲ್ಲ. ಅಭಿವೃದ್ಧಿಯೇ ನನ್ನ ಮುಖ್ಯ ಗುರಿಯಾಗಿದೆ ಎಂದರು.
ಮುಸ್ಲಿಮರ ಬಾಹುಳ್ಯವುಲ್ಲ ಮಂಗಳೂರು ಕ್ಷೇತ್ರದಲ್ಲಿ ಮೂರು ಬಾರಿ ಕಾಂಗ್ರೆಸ್ ಗೆದ್ದು ಬಂದರೂ ಮುಸ್ಲಿಮರಿಗೆ ರಕ್ಷಣೆ ಸಿಕ್ಕಿಲ್ಲ. ಪ್ರತಿ ವಿಷಯದಲ್ಲೂ ಮುಸ್ಲಿಮರಿಗೆ ಅನ್ಯಾಯ ಆಗುತ್ತಿದೆ. ಸರಕಾರದ ಯೋಜನೆಗಳು ಅಲ್ಪಸಂಖ್ಯಾತರ ಮನೆ ತಲುಪಿಲ್ಲ. ಆಶ್ರಯ ಇಲ್ಲದವರಿಗೆ ಆಶ್ರಯದ ವ್ಯವಸ್ಥೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ. ಇದರಿಂದ ತೊಂದರೆಗೊಳಗಾದ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡುವ ಯೋಜನೆ ಹಾಕಲಾಗಿದೆ. ಈ ಕ್ಷೇತ್ರದ ಅಭಿವೃದ್ಧಿ ಮತ್ತು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಗುರಿ ಜೆಡಿಎಸ್ ಇಟ್ಟುಕೊಂಡಿದೆ. ಈ ಬಾರಿ ಒಂದು ಬದಲಾವಣೆ ಬಯಸಿದ್ದೇವೆ. ಮತದಾರರು ಜೆಡಿಎಸ್ ಪರ ಇದ್ದಾರೆ. ಅವರಿಗೆ ಕಾಂಗ್ರೆಸ್‌ನಿಂದಾದ ಅನ್ಯಾಯ, ನೋವು ಅರಿವಾಗಿದೆ. ಈ ಕಾರಣದಿಂದ ಜೆಡಿಎಸ್ ಗೆದ್ದು ಬರಲಿದೆ ಎಂದರು.
ದಿನಕರ ಉಳ್ಳಾಲ ಮಾತನಾಡಿ ಖಾದರ್ ಸಚಿವರಾದ ಮೇಲೆ ಉಳ್ಳಾಲದ ಅಭಿವೃದ್ಧಿಯ ಯಾವುದೇ ಕೆಲಸಗಳು ಆಗಿಲ್ಲ. ಜನಪರ ಕೆಲಸ ನಮ್ಮಿಂದಾಗಬೇಕು. ಅದಕ್ಕಾಗಿ ಜೆಡಿಎಸ್ ತಯಾರಾಗಿ ನಿಂತಿದೆ ಎಂದರು.
ಈ ಸಂದರ್ಭದಲ್ಲಿ ಅಕ್ಷಿತ್ ಸುವರ್ಣ, ನಝೀರ್ ಉಳ್ಳಾಲ, ನಾಸಿರ್ ಉಳ್ಳಾಲ, ಮಂಗಳೂರು ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಕಾರ್ಯದರ್ಶಿ ಹೈದರ್ ಉಳ್ಳಾಲ, ಕಬೀರ್, ಫಯಾರ್, ರಶೀದ್, ಭರತ್‌ಶೆಟ್ಟಿ, ರಹ್ಮಾನ್ ಮೊದಲಾದವರು ಇದ್ದರು.