×
Ad

ಸುರತ್ಕಲ್: ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

Update: 2018-05-03 20:06 IST

ಮಂಗಳೂರು, ಮೇ 3: ಕೇಂದ್ರದ ಬಿಜೆಪಿ ಸರಕಾರದ ಆಡಳಿತ ನೀತಿ, ಡಿಮಾನಿಟೈಸೇಶನ್, ಉದ್ಯೋಗ ಕಡಿತ, ಆರ್ಥಿಕ ಪ್ರಗತಿ ಕುಂಠಿತ, ಅಭಿವೃದ್ಧಿಯಲ್ಲಿ ಹಿನ್ನಡೆ ಮುಂತಾದ ಸಮಸ್ಯೆಗಳಿಂದ ಯುವ ಜನತೆ ನಿರುದ್ಯೋಗದ ಭೀತಿ ಎದುರಿಸುತ್ತಿದ್ದಾರೆ. ಇದರಿಂದಾಗಿ ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕರಕ್ಕೆ ಬರಬೇಕು ಎಂಬ ಉದ್ದೇಶದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊಯ್ದಿನ್ ಬಾವಾ ಹೇಳಿದ್ದಾರೆ.

ಚೊಕ್ಕಬೆಟ್ಟುವಿನಲ್ಲಿ ಆಯೋಜಿಸಲಾದ ಕಾಂಗ್ರೆಸ್ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರವು ಶ್ರೀಮಂತರ ಪರವಾಗಿದೆ. ಶ್ರೀಮಂತರಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಿದೆ. ಬಡವರನ್ನು ಮುಖ್ಯವಾಹಿನಿಗೆ ತರುವ ಯಾವುದೇ ಯೋಜನೆಗಳು ಇಲ್ಲ. ಯೋಜನೆಗಳು ಅನುಷ್ಠಾನವಾಗದೆ ಬರೇ ಘೊಷಣೆ ಮತ್ತು ಪ್ರಚಾರ ಮಾತ್ರ ಮಾಡುತ್ತಿದ್ದಾರೆ. ಆದರೆ ಇಂದು ರಾಜ್ಯದಲ್ಲಿ ಬಡವರ ಪರವಾದ ಸರಕಾರವಿದೆ. ಬಡವರ ಒಂದು ಹೊತ್ತಿನ ಊಟಕ್ಕೂ ಸಮಸ್ಯೆಯಾಗಬಾರದು ಎಂದು ಸುರತ್ಕಲ್ ಸಹಿತ ರಾಜ್ಯಾದ್ಯಂತ ಇಂದಿರಾ ಕ್ಯಾಂಟಿನ್ ನಿರ್ಮಿಸಿದ್ದೇವೆ. ವಲಸೆ ಕಾರ್ಮಿಕರು, ಬಡವರು ಇಂದು ಹಸಿವಿನಿಂದ ಬಳಲುವ ಪ್ರಶ್ನೆಯೇ ಇಲ್ಲ. ಬಡ ವರ್ಗಕ್ಕೆ ಬಹು ಮಹಡಿ ವಸತಿ ನಿರ್ಮಣ ಮಾಡಿ ಸೂರು ಒದಗಿಸುತಿತಿದ್ದೇವೆ. ಲಕ್ಷ ಲಕ್ಷ ಉದ್ಯೋಗ ನೀಡಿದ್ದೇವೆ ಎಂದರು.ಬಿಜೆಪಿ ಕೇಂದ್ರ ಸರಕಾರ ಬಾಯಿ ಮಾತಿನಲ್ಲಿ ಪ್ರಚಾರ ಪಡೆದುಕೊಳ್ಳುವುದನ್ನು ಬಿಟ್ಟರೆ ಜನ ಸಾಮಾನ್ಯನಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಬ್ಯಾಂಕ್ ಲೂಟಿ ಮಾಡಿ ಶ್ರೀಮಂತರು ಪರಾರಿಯಾಗುತ್ತಿದ್ದಾರೆ. ಆಡಳಿತ ಮಾಡಲಾಗದೆ ದೇಶವನ್ನು ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿ ಕೊಳ್ಳುವಂತೆ ಮಾಡುತ್ತಿದೆ ಎಂದು ಆರೋಪಿಸಿದರು.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ಯಾವುದೇ ಜಾತಿ ವೈಷಮ್ಯದ ಗಲಭೆಯಾಗದಂತೆ ನೋಡಿಕೊಂಡಿದ್ದೇನೆ. ಹತ್ಯೆ ಪ್ರಕರಣದ ಸಂದರ್ಭ ಕಾನೂನು ಸುವ್ಯವಸ್ಥೆ ಉತ್ತಮವಾಗಿ ನಿಭಾಯಿಸಿದ್ದೇನೆ. ಇಲ್ಲಿನ ಬಹು ಸಂಖ್ಯಾತರ ಸಹಿತ ಎಲ್ಲರೂ ನನ್ನನ್ನು ಆಶೀರ್ವದಿಸಿ ಕಳುಹಿಸಿದ್ದಾರೆ. ಉತ್ತಮ ಸೌಲಭ್ಯ ಒದಗಿಸುವಲ್ಲಿ ಯಶಸ್ವಿಯಾಗಿದ್ದೇನೆ. ರಸ್ತೆ, ಕುಡಿಯುವ ನೀರು, ಆರೋಗ್ಯ ಮತ್ತಿತರ ಯೋಜನೆಗಳಿಗೆ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದರು.

ಚುನಾವಣಾ ಉಸ್ತುವಾರಿ ದೇವಿ ಪ್ರಸಾದ್ ಶೆಟ್ಟಿ, ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ, ಮೇಯರ್ ಭಾಸ್ಕರ ಮೊಲಿ, ಉಪಮೇಯರ್ ಮುಹಮ್ಮದ್, ಶಶಿಧರ ಹೆಗ್ಡೆ, ಪ್ರತಿಭಾ ಕುಳಾಯಿ, ಬಶೀರ್ ಬೈಕಂಪಾಡಿ, ಕೆ. ಸದಾಶಿವ ಶೆಟ್ಟಿ, ವೈ.ರಮಾನಂದ ರಾವ್, ಪ್ರತಿಭಾ ಕುಳಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News