ಮೇ 4: ಮಂಗಳೂರಿನಲ್ಲಿ ಮುಹಮ್ಮದ್ ಅಝರುದ್ದೀನ್ ರೋಡ್ ಶೋ
Update: 2018-05-03 20:07 IST
ಮಂಗಳೂರು, ಮೇ 3: ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕ, ಮಾಜಿ ಕ್ರಿಕೆಟ್ ಕಪ್ತಾನ ಮುಹಮ್ಮದ್ ಅಝರುದ್ದೀನ್ ಮೇ 4ರಂದು ಸಂಜೆ 4 ಗಂಟೆಗೆ ನಗರದ ಬಂದರ್ ಪೊಲೀಸ್ ಠಾಣೆ ಬಳಿಯಿಂದ ಕಂಡತ್‌ಪಳ್ಳಿಯ ಮೂಲಕ ಸುಲ್ತಾನ್ ಬತ್ತೇರಿಯ ವರೆಗೆ ರೋಡ್ ಶೋ ನಡೆಸಲಿದ್ದಾರೆ.
ಈ ಸಂದರ್ಭ ಅವರು ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಆರ್.ಲೋಬೊ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.