×
Ad

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಕರಿಯರ್ ಟ್ರೀ ಉದ್ಘಾಟನೆ

Update: 2018-05-03 20:24 IST

ಭಟ್ಕಳ, ಮೇ 3: ಶಿಕ್ಷಣ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳ ಬಗೆಗಿನ ಮಾಹಿತಿಯನ್ನು ನೀಡಲು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜು ಪ್ರಾರಂಭಿಸಿದ ದಿಶಾ ವೃತ್ತಿ ತರಬೇತಿ ಕೇಂದ್ರದ ತಿಯಿಂದ "ಕರಿಯರ್ ಟ್ರೀ" ಉದ್ಘಾಟನೆಯನ್ನು  ಎಸ್.ಬಿ.ಐ ಶಾಖಾ ಪ್ರಭಂದಕ ಅರುಣ್ ರೋಯ್ ಹಾಗು ಕರ್ನಾಟಕ ಬ್ಯಾಂಕ್‌ನ ಶಾಖಾ ಪ್ರಭಂದಕರಾದ ವಿನಾಯಕ್ ಮೊಗೇರ್ ಜಂಟಿಯಾಗಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಡಾ. ಸುರೇಶ್ ನಾಯಕ್, ಪ್ರಮುಖರಾದ ರಾಘವೇಂದ್ರ ಶೇಟ್, ಅಕ್ಷಯ್ ಕೊಲ್ಲೆ, ಬಿ.ಆರ್.ಕೆ ಮೂರ್ತಿ, ಕಾಲೇಜಿನ ಪ್ರಾಂಶುಪಾಲ ನಾಗೇಶ ಭಟ್, ಉಪ ಪ್ರಾಂಶುಪಾಲ ಶ್ರೀನಾಥ ಪೈ, ಉಪನ್ಯಾಸಕರಾದ ವಿಖ್ಯಾತ ಪ್ರಭು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News