×
Ad

ಭಟ್ಕಳ: ಅಂಜುಮನ್ ಬಿಬಿಎ, ಬಿಸಿಎ ಕಾಲೇಜ್ ವಿದ್ಯಾರ್ಥಿನಿ ಖುರ್ರತುಲ್ ಐನ್ ಶೇಖ್ ಪ್ರಥಮ ರ್ಯಾಂಕ್

Update: 2018-05-03 22:03 IST

ಭಟ್ಕಳ, ಮೇ 3: ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ್ ಅಪ್ಲಿಕೇಶ್ (ಬಿಬಿಎ ಮತ್ತು ಬಿಸಿಎ) ಕಾಲೇಜಿನ ಖುರ್ರತುಲ್ ಐನ್ ಮುಷ್ತಾಖ್ ಆಹ್ಮದ್ ಶೇಖ್ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸಿದ ಸೆಮಿಸ್ಟರ್ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಅಲ್ಲದೆ ಇದೇ ಸಂಸ್ಥೆಯ ಮುಹಮ್ಮದ್ ಅನ್ಝಾಫ್ ಅಲ್ತಾಫ್ ಗೌಹರ್ ದಾಮೂದಿ 6ನೇ ರ್ಯಾಂಕ್, ಮುಹಮ್ಮದ್ ಸಲ್ಮಾನ್ ಅಬ್ದುಲ್ ಗನಿ ಪೋತ್ಕಾರ್ 9ನೇ ರ್ಯಾಂಕ್ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News