ಸಿರಿಯದಲ್ಲಿ ರಶ್ಯ ಯುದ್ಧ ವಿಮಾನ ಪತನ: ಇಬ್ಬರು ಪೈಲಟ್ ಸಾವು
Update: 2018-05-03 22:27 IST
ಮಾಸ್ಕೊ, ಮೇ 3: ಸಿರಿಯದ ವಾಯುನೆಲೆಯೊಂದರಿಂದ ಹಾರಾಟ ನಡೆಸಿದ ರಶ್ಯದ ಯುದ್ಧ ವಿಮಾನವೊಂದು ಗುರುವಾರ ಪತನಗೊಂಡಿದ್ದು, ಇಬ್ಬರೂ ಪೈಲಟ್‌ಗಳು ಮೃತಪಟ್ಟಿದ್ದಾರೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಹಮೈಮಿಮ್ ವಾಯುನೆಲೆಯಿಂದ ಹಾರಾಟ ಆರಂಭಿಸಿದ ಬಳಿಕ ರಶ್ಯದ ಎಸ್‌ಯು-30 ಎಸ್‌ಎಂ ವಿಮಾನವು ಮೆಡಿಟರೇನಿಯನ್ ಸಮುದ್ರದಲ್ಲಿ ಪತನಗೊಂಡಿತು. ವಿಮಾನವನ್ನು ಉಳಿಸಲು ಕೊನೆಯ ಕ್ಷಣದವರೆಗೂ ಹೋರಾಡಿದ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ’’ ಎಂದು ಸಚಿವಾಲಯ ಹೇಳಿಕೆ ಹೇಳಿದೆ.
ವಿಮಾನದ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂದು ಹೇಳಿರುವ ರಶ್ಯ ರಕ್ಷಣಾ ಸಚಿವಾಲಯವು, ಹಕ್ಕಿಯೊಂದು ವಿಮಾನದ ಇಂಜಿನ್‌ಗೆ ಅಪ್ಪಳಿಸಿರುವುದು ಪತನಕ್ಕೆ ಕಾರಣವಾಗಿರಬಹುದು ಎಂದಿದೆ.
ಇದರೊಂದಿಗೆ, ಸಿರಿಯದಲ್ಲಿ ರಶ್ಯದ ಸೈನಿಕರ ಅಧಿಕೃತ ಸಾವಿನ ಸಂಖ್ಯೆ 86ಕ್ಕೇರಿದೆ.