ಪ್ರಧಾನಿ ಆಗಮನ ಹಿನ್ನೆಲೆ: ವಾಹನ ನಿಲುಗಡೆ ನಿಷೇಧ
ಮಂಗಳೂರು, ಮೇ 3: ಪ್ರಧಾನಿ ನರೇಂದ್ರ ಮೋದಿ ಅವರು ಮೇ 5ರಂದು ನಗರದ ನೆಹರೂ ಮೈದಾನಕ್ಕೆ ಆಗಮಿಸುವ ಹಿನೆಲೆಯಲ್ಲಿ ಅಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಕೆಳಗೆ ಸೂಚಿಸಿದ ಸ್ಥಳಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ.
ಪ್ರಧಾನಿ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ಕೆಂಜಾರು-ಮರವೂರು-ಮರಕಡ-ಕಾವೂರು-ಬೊಂದೇಲ್-ಪದವಿನಂಗಡಿ- ಯೆಯ್ಯಾಡಿ- ಕೆಪಿಟಿ-ಸರ್ಕ್ಯೂಟ್ ಹೌಸ್ ಬಟ್ಟಗುಡ್ಡೆ-ಕದ್ರಿ ಕಂಬಳ- ಭಾರತ್ ಬೀಡಿ ಕ್ರಾಸ್-ಬಂಟ್ಸ್ ಹಾಸ್ಟೆಲ್- ಡಾ.ಅಂಬೇಡ್ಕರ್ ವೃತ್ತ- -ಎ.ಬಿ.ಶೆಟ್ಟಿ ವೃತ್ತ- ನೆಹರೂ ಮೈದಾನದವರೆಗೆ. ಹಾಗೂ ನೆಹರೂ ಮೈದಾನದಿಂದ ವಾಪಾಸು ಹೋಗುವ ಸಮಯದಲ್ಲಿ ಕ್ಲಾಕ್ ಟವರ್-ಕೆ.ಬಿ.ಕಟ್ಟೆ- ಲೈಟ್‌ಹೌಸ್ ಹಿಲ್ ರಸ್ತೆ- ಡಾ.ಅಂಬೇಡ್ಕರ್ ವೃತ್ತ- ಬಂಟ್ಸ್ ಹಾಸ್ಟೆಲ್, ಭಾರತ್ ಬೀಡಿ ಕ್ರಾಸ್- ಕದ್ರಿ ಕಂಬಳ-ಬಟ್ಟಗುಡ್ಡೆ- ಕೆ.ಪಿ.ಟಿ.ಯೆಯ್ಯೆಡಿ- ಪದವಿನಂಗಡಿ-ಬೊಂದೇಲ್- ಕಾವೂರು- ಮರಕಡ-ಮರವೂರು- ಕೆಂಜಾರು- ಮಂಗಳೂರು ವಿಮಾನ ನಿಲ್ದಾಣದ ವರೆಗೆ ಸಂಚರಿಸುವ ಮಾರ್ಗದಲ್ಲಿನ ಇಕ್ಕೆಲಗಳಲ್ಲಿ ಎಲ್ಲಾ ತರದ ವಾಹನಗಳನ್ನು ನಿಲುಗಡೆಯನ್ನು ನಿಷೇಧಿಸಲಾಗಿದೆ.
ನೆಹರೂ ಮೈದಾನ ಮತ್ತು ಸುತ್ತಮುತ್ತಲಿನ 50 ಮೀಟರ್ ವ್ಯಾಪ್ತಿಯಲ್ಲಿ ಮೇ 5ರಂದು ಬೆಳಗ್ಗೆ 8 ಗಂಟೆಯಿಂದ ಕಾರ್ಯಕ್ರಮ ಮುಗಿಯುವ ತನಕ (ರಾತ್ರಿ 8 ಗಂಟೆವರೆಗೆ) ಎಲ್ಲಾ ತರದ ವಾಹನಗಳನ್ನು ಅನಾವಶ್ಯಕವಾಗಿ ನಿಲ್ಲಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಅಂದು ಬೆಳಗ್ಗೆ 8ಗಂಟೆಯಿಂದ ವಿವಿಐಪಿಯವರು ನಿರ್ಗಮಿಸುವವರೆಗೆ (ರಾತ್ರಿ 9 ಗಂಟೆ) ಸರ್ಕ್ಯೂಟ್ ಹೌಸ್ ಆವರಣದಲ್ಲಿ ಅನಾವಶ್ಯಕ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.