×
Ad

ವೈದ್ಯನ ಬಿಡುಗಡೆಗೆ ಅಮೆರಿಕ ಜೊತೆ ಒಪ್ಪಂದವಿಲ್ಲ: ಪಾಕ್

Update: 2018-05-03 23:08 IST

ಇಸ್ಲಾಮಾಬಾದ್, ಮೇ 3: 2011ರಲ್ಲಿ ಉಸಾಮಾ ಬಿನ್ ಲಾದನ್‌ನನ್ನು ಪತ್ತೆಹಚ್ಚುವಲ್ಲಿ ಅಮೆರಿಕದ ಸೈನಿಕರಿಗೆ ನೆರವು ನೀಡಿದ್ದ ವೈದ್ಯನ ಬಿಡುಗಡೆಗೆ ಸಂಬಂಧಿಸಿ ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಒಪ್ಪಂದ ಏರ್ಪಟ್ಟಿಲ್ಲ ಎಂದು ಆ ದೇಶದ ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ.

ಪಾಕಿಸ್ತಾನಿ ಅಧಿಕಾರಿಗಳು ಪೇಶಾವರದ ಜೈಲೊಂದರಲ್ಲಿದ್ದ ಡಾ. ಶಕೀಲ್ ಅಫ್ರಿದಿಯನ್ನು ಅಜ್ಞಾತ ಸ್ಥಳವೊಂದಕ್ಕೆ ಸ್ಥಳಾಂತರಿಸಿದ ಹಲವು ದಿನಗಳ ಬಳಿಕ ಸಚಿವಾಲಯದ ವಕ್ತಾರ ಮುಹಮ್ಮದ್ ಫೈಸಲ್ ಗುರುವಾರ ಈ ಹೇಳಿಕೆ ನೀಡಿದ್ದಾರೆ.

ಭಯೋತ್ಪಾದಕರೊಂದಿಗೆ ನಂಟು ಹೊಂದಿದ ಆರೋಪದಲ್ಲಿ ಪಾಕಿಸ್ತಾನದ ನ್ಯಾಯಾಲಯವೊಂದು ವೈದ್ಯರಿಗೆ 33 ವರ್ಷಗಲ ಜೈಲು ಶಿಕ್ಷೆ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News