ಚಿಟ್‌ಫಂಡ್ ಮಸೂದೆ ಸ್ಥಾಯಿ ಸಮಿತಿಗೆ ಒಪ್ಪಿಸಿದ ಸ್ಪೀಕರ್

Update: 2018-05-03 17:38 GMT

ಹೊಸದಿಲ್ಲಿ, ಮೇ 3: ಚಿಟ್‌ಫಂಡ್ ಕ್ಷೇತ್ರವನ್ನು ಮುಖ್ಯವಾಹಿನಿಗೆ ತರುವ ಹಾಗೂ ಸದೃಢಗೊಳಿಸುವ ಉದ್ದೇಶದ ಚಿಟ್‌ಫಂಡ್ ಮಸೂದೆಯನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಣಕಾಸು ಕುರಿತ ಸ್ಥಾಯಿ ಸಮಿತಿಗೆ ಕಳಿಸಿಕೊಟ್ಟಿದ್ದಾರೆ. 1982ರ ಚಿಟ್‌ಫಂಡ್ ಕಾಯ್ದೆಗೆ ತಿದ್ದುಪಡಿ ತರಲು ಬಯಸಿರುವ ಮಸೂದೆ ಇದಾಗಿದೆ. ಚಿಟ್‌ಫಂಡ್ ಕ್ಷೇತ್ರವನ್ನು ಕ್ರಮಬದ್ಧವಾಗಿ ಅಭಿವೃದ್ಧಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಬೇಕೆಂದು ತಿಳಿಸಿ ಹಾಗೂ ಈ ಕ್ಷೇತ್ರಕ್ಕೆ ಕಾನೂನುಬದ್ಧ, ಸಾಂಸ್ಥಿಕ ರೂಪುರೇಷೆ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಸಲಹಾ ಸಮಿತಿಯೊಂದನ್ನು ಈಗಾಗಲೇ ರಚಿಸಿದೆ.

ಕಾಂಗ್ರೆಸ್ ಸಂಸದ ಎಂ.ವೀರಪ್ಪ ಮೊಯ್ಲಿ ಅಧ್ಯಕ್ಷತೆಯ 31 ಸದಸ್ಯರುಳ್ಳ ಹಣಕಾಸು ಕುರಿತ ಸ್ಥಾಯಿ ಸಮಿತಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೂ ಸದಸ್ಯರಾಗಿದ್ದಾರೆ. ರಾಜ್ಯ ಸರಕಾರದ ಪೂರ್ವಾನುಮತಿಯಿಲ್ಲದೆ ಚಿಟ್‌ಫಂಡ್ ಸ್ಥಾಪಿಸುವುದನ್ನು ನಿಷೇಧಿಸುವ ಪ್ರಮುಖ ಅಂಶವನ್ನು ಮಸೂದೆ ಒಳಗೊಂಡಿದೆ. ಅಲ್ಲದೆ ಬಿಡ್ ತೆರೆಯುವಾಗ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸದಸ್ಯರ ಜೊತೆ ಮಾತುಕತೆ ನಡೆಸುವುದನ್ನು ಹಾಗೂ ಈ ಚರ್ಚೆಯನ್ನು ದಾಖಲೀಕರಣಗೊಳಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಚಿಟ್‌ಫಂಡ್ ನಿರ್ವಹಿಸುವ ಸಂಸ್ಥೆಯ ಪರವಾಗಿ ಹಣ ಸಂಗ್ರಹಿಸುವ ವ್ಯಕ್ತಿಗೆ ನೀಡುವ ಕಮಿಷನ್ ಮೊತ್ತವನ್ನು ಶೇ.5ರಿಂದ ಶೇ.7ಕ್ಕೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News