9 ವರ್ಷದ ಬಾಲಕಿಯ ಅತ್ಯಾಚಾರ

Update: 2018-05-03 18:00 GMT

ಗುಂಟೂರು, ಮೇ 3: ಒಂಬತ್ತು ವರ್ಷದ ಬಾಲಕಿಯ ಮೇಲೆ 50 ವರ್ಷದ ವೃದ್ದನೋರ್ವ ಅತ್ಯಾಚಾರ ಎಸಗಿದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಹೆದ್ದಾರಿ ವಾಹನ ಸಂಚಾರವನ್ನು ಗುರುವಾರ ಬೆಳಗ್ಗೆ ವರೆಗೆ ತಡೆದರು. ಬುಧವಾರ ಅಪರಾಹ್ನ ಬಾಲಕಿ ಹೊಟ್ಟೆ ನೋವು ಹಾಗೂ ರಕ್ತಸ್ರಾವ ಆಗುತ್ತಿದೆ ಎಂದು ಹೇಳಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯಕೀಯ ಪರೀಕ್ಷೆ ಬಳಿಕ ವೈದ್ಯರು ಬಾಲಕಿಯ ದೇಹದಲ್ಲಿ ಹಲವು ಗಾಯಗಳಾಗಿರುವುದು ಹಾಗೂ ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದ್ದಾರೆ. ಬಾಲಕಿಯಲ್ಲಿ ಕೇಳಿದಾಗ ರಿಕ್ಷಾ ಗಾಡಿ ಎಳೆಯುವ ವ್ಯಕ್ತಿ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂತು.

ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಗುಂಟೂರು ಪೊಲೀಸ್ ಅಧೀಕ್ಷಕ ಅಪ್ಪಾಲ ನಾಯ್ಡು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News