ಸಲಫಿ ಮದ್ರಸಗಳ 7ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟ
Update: 2018-05-04 17:56 IST
ಮಂಗಳೂರು, ಮೇ 4: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಮಂಗಳೂರು, ಇದರ ಅಧೀನದ ಸಲಫಿ ಎಜುಕೇಶನ್ ಬೋರ್ಡ್ ವತಿಯಿಂದ ನಡೆಸಲಾದ 2017-18ನೇ ಸಾಲಿನ 7ನೇ ತರಗತಿ ಪಬ್ಲಿಕ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ.
ದೇರಳಕಟ್ಟೆ ಮದ್ರಸತುಲ್ ಇಸ್ಲಾಹಿಯ್ಯಾದ ವಿದ್ಯಾರ್ಥಿನಿ ಹಾಗೂ ಅಬೂಬಕರ್ ರಫೀಕ್ ಮತ್ತು ಬುಶ್ರಾ ದಂಪತಿಯ ಪುತ್ರಿ ಆಯಿಶಾ ಅಫ್‌ಶೀನಾ ಪ್ರಥಮ ಸ್ಥಾನ ಗಳಿಸಿದ್ದಾರೆ. ಚೊಕ್ಕಬೆಟ್ಟು ಸಿರಾತೇ ಮುಸ್ತಖೀಮ್ ಮದ್ರಸ ವಿದ್ಯಾರ್ಥಿನಿ ಹಾಗೂ ಅನ್ವರ್ ಹುಸೈನ್ ಮತ್ತು ನುಮೈಝಾ ದಂಪತಿಯ ಪುತ್ರಿ ಆಯಿಶಾ ಅಲೀಫಾ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಜಾಲ್ ಜಲ್ಲಿಗುಡ್ಡೆಯ ಮಿಫ್ತಾಹುಲ್ ಉಲೂಂ ಮದ್ರಸ ವಿದ್ಯಾರ್ಥಿನಿ ಹಾಗೂ ಮುಹಮ್ಮದ್ ಸಿದ್ದೀಕ್ ಮತ್ತು ಸಾಜಿದಾ ದಂಪತಿಯ ಪುತ್ರಿ ಸಾಬಿದಾ ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.