×
Ad

ಗಿರಿಜಾ ಗಾಂವ್ಕರ್‌ರ ಕಥಾಸಂಕಲನ ‘ನತ್ತು’ ಲೋಕಾರ್ಪಣೆ

Update: 2018-05-04 20:56 IST

ಉಡುಪಿ, ಮೇ 4: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ಪ್ರೊ.ಡಿ. ಜಿ. ಮುದ್ರಣ ಇವರ ಸಹಯೋಗದಲ್ಲಿ ಗಿರಿಜಾ (ಹೆಗಡೆ) ಗಾಂವ್ಕರ್ ಇವರ ‘ನತ್ತು’ ಕಥಾಸಂಕಲನ ಬಿಡುಗಡೆ ಸಮಾರಂಭ ಇತ್ತೀಚೆಗೆ ಎಂಜಿಎಂ ಕಾಲೇಜಿನ ಆವರಣದ ಧ್ವನಾ್ಯಲೋಕ ಸಭಾಂಗಣದಲ್ಲಿ ನಡೆಯಿತು.

ಲೇಖಕಿ ಸುಶೀಲಾ ಹೆಗಡೆ ಹಳೇಕಾನಗೋಡ ಇವರು ಕೃತಿ ಲೋಕಾರ್ಪಣೆ ಗೊಳಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಹಿತಿ ಹಾಗೂ ಅಂಕಣಕಾರರಾದ ಸಂತೋಷ್ ಕುಮಾರ ಮೆಹೆಂದೆಳೆ ಮಾತನಾಡಿ ‘ಸಾಹಿತಿ ಗಳು ಉತ್ತಮ ಬರಹಗಳನ್ನು ನೀಡಿದರೆ ಪತ್ರಿಕೆಗಳು ಮತ್ತು ಓದುಗರು ಅದನ್ನು ಖಂಡಿತವಾಗಿಯೂ ಸ್ವೀಕರಿಸುತ್ತಾರೆ. ಅಪ್ಪಟ ಮಲೆನಾಡಿನ ಅಕ್ಷರಗಳ ತೇರಿನ ದಿಬ್ಬಣದಲ್ಲಿ ಆರ್ದ್ರತೆಯ ಆಪ್ತ ಕಥೆಗಳನ್ನು ನೀಡಿರುವ ಗಿರಿಜಾ ಗಾಂವ್ಕರ್ ಕಥೆಗಳು ಮೌಲಿಕವಾದುದು’ ಎಂದು ಅಭಿಪ್ರಾಯಪಟ್ಟರು.

ಮತ್ತೊಬ್ಬ ಮುಖ್ಯ ಅತಿಥಿ ಆರ್‌ಆರ್‌ಸಿಯ ಪ್ರೊ. ವರದೇಶ ಹಿರೇಗಂಗೆ ಮಾತನಾಡಿ, ಮಹಿಳೆಯರ ಬರವಣಿಗೆಯಲ್ಲಿ ವಿಶೇಷ ಪರಂಪರೆಯಿದೆ. ಸೂಕ್ಷ್ಮವಾದ ಗ್ರಹಿಕೆಯೇ ಇಲ್ಲಿಯ ಕಥೆಗಳ ಜೀವಾಳ ಎಂದರು. ಕವಯಿತ್ರಿ ಜ್ಯೋತಿ ವುಹದೇವ ಕೃತಿಪರಿಚಯ ಮಾಡಿದರು.

ಮತ್ತೊಬ್ಬ ಮುಖ್ಯ ಅತಿಥಿ ಆರ್‌ಆರ್‌ಸಿಯ ಪ್ರೊ. ವರದೇಶ ಹಿರೇಗಂಗೆ ಮಾತನಾಡಿ, ಮಹಿಳೆಯರ ಬರವಣಿಗೆಯಲ್ಲಿ ವಿಶೇಷ ಪರಂಪರೆಯಿದೆ. ಸೂಕ್ಷ್ಮವಾದ ಗ್ರಹಿಕೆಯೇ ಇಲ್ಲಿಯ ಕಥೆಗಳ ಜೀವಾಳ ಎಂದರು. ಕವಯಿತ್ರಿ ಜ್ಯೋತಿ ಮಹದೇವ ಕೃತಿಪರಿಚಯ ಮಾಡಿದರು. ಖ್ಯಾತ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣುಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಗೋಪಾಲಕೃಷ್ಣ ಎಂ.ಗಾಂವ್ಕರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗಿರಿಜಾ ಗಾಂವ್ಕರ್ ವಂದಿಸಿದರು.

ಬಳಿಕ ಸಂಗೀತ ಸಂಜೆ ‘ಮಾಹೋಲ್’ನ ವಿನೂತನ ಪ್ರಯೋಗ ನಡೆಯಿತು. ಇದನ್ನು ಝೀ ಟಿವಿ ಸರಿಗಮಪ ವಿಜೇತ ಗಗನ್ ಗಾಂವ್ಕರ್ ಸೂಫಿ, ಗಜಲ್, ಭಕ್ತಿಗೀತೆ, ಭಾವಗೀತೆ, ಅಭಂಗ್ ಮುಂತಾದ ಗೀತೆಗಳ ಮೂಲಕ ನಡೆಸಿ ಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News